ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ

Spread the love

ಬಿಜೆಪಿ ಶಿಸ್ತು ಸಮಿತಿ ಕರ್ನಾಟಕದ ಬಸನಗೌಡ ಯತ್ನಾಳ್ ರವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ತಿಳಿಸಿದೆ. ಯತ್ನಾಳ್ ರವರು ಬಹಳ ದಿನದಿಂದ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದರು. ಪಕ್ಷವು ಸಾಕಷ್ಟು ಬಾರಿ ತಿದ್ದುಕೊಳ್ಳಲು ಅವಕಾಶವನ್ನು ನೀಡಿತ್ತು. ಆದರೆ ಯತ್ನಾಳ್ ರವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ.