ಗೀತೆ – 23 : ಶ್ರೀ ಕೃಷ್ಣನು ಈ ನಿರ್ವೀರ್ಯತ್ವವು ತಕ್ಕದ್ದಲ್ಲ ಎನ್ನುತ್ತಾನೆ
ಶ್ರೀ ಮದ್ಭಗವದ್ಗೀತಾ 23 ಎರಡನೆಯ ಅಧ್ಯಾಯ 2.ಸಾಂಖ್ಯಯೋಗ ಸಂಜಯ ಉವಾಚ: 1.ತಂ ತಥಾ ಕೃಪಯಾಽಽವಿಷ್ಟಂ ಅಶ್ರುಪೂರ್ಣಾ ಕುಲೇಕ್ಷಣಮ್ | ವಿಷೀದಂತಮಿದಂ ವಾಕ್ಯಂ ಉವಾಚ ಮಧುಸೂದನಃ|| ಸಂಜಯಃ = ಸಂಜಯನು, ಉವಾಚ = ಹೇಳಿದನು. ತಥಾ = ಹಾಗೆ, ಕೃಪಯಾ = ಕನಿಕರದಿಂದ, ಆವಿಷ್ಟಂ = ಆವಹಿಸಲ್ಪಟ್ಟವನೂ, ಅಶ್ರುಪೂರ್ಣಾಕುಲೇಕ್ಷಣಂ = ಕಣ್ಣೀರು ತುಂಬಿ ವ್ಯಾಕುಲವಾದ ಕಣ್ಣುಗಳುಳ್ಳವನೂ, ವಿಷೀದಂತಂ = ದುಃಖಿಸುತ್ತಿರುವವನೂ ಆದ, ತಂ = ಆ ಅರ್ಜುನನ್ನು ಕುರಿತು, ಮಧುಸೂದನಃ = ಶ್ರೀಕೃಷ್ಣನು, ಇದಂ-ವಾಕ್ಯಂ = ಈ ಮಾತನ್ನು,…