
ಗೀತೆ – 111 : ಪರಮಾತ್ಮ ಜ್ಞಾನವೆಂಬ ಅಗ್ನಿಜ್ವಾಲೆಯು ಜನ್ಮ ಜನ್ಮಾಂತರಗಳ ಪಾಪಪುಣ್ಯವನ್ನು ಭಸ್ಮ ಮಾಡುತ್ತದೆ
ಶ್ರೀ ಮದ್ಭಗವದ್ಗೀತಾ : 111 36. ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ। ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ॥ ಸರ್ವೇಭ್ಯಃ = ಸಮಸ್ತವಾದ, ಪಾಪೇಭ್ಯಃ = ಪಾಪಿಗಳಿಗಿಂತ, ಪಾಪಕೃತ್ತಮಃ = (ನೀನು) ಅತ್ಯಧಿಕ ಪಾಪಿಯು, ಅಪಿ-ಚೇತ್-ಅಸಿ = ಆಗಿದ್ದರೂ ಕೂಡ, ಸರ್ವಂ = ಸಮಸ್ತವಾದ, ವೃಜಿನಂ = ಪಾಪಪುಣ್ಯರೂಪವಾದ ಸಂಸಾರ ಸಮುದ್ರವನ್ನು, ಜ್ಞಾನಪ್ಲವೇನ-ಏವ = ಜ್ಞಾನವೆಂಬ ಹಡಗಿನಿಂದಲೇ, ಸಂತರಿಷ್ಯಸಿ = ದಾಟಿಬಿಡುವೆ. ಎಲೈ ಅರ್ಜುನನೆ! ನೀನು ಸಹಜವಾಗಿ ಪವಿತ್ರನೇ ಆಗಿದ್ದೀಯೆ. ಒಂದು ವೇಳೆ ನೀನು ಪಾಪಾತ್ಮರೆಲ್ಲರಲ್ಲಿಯೂ ಘೋರಾತಿಘೋರವಾದ…