ಗೀತೆ : 27 – ಜ್ಞಾನ ಸಿದ್ಧಿ ಉಳ್ಳವರು ಶೋಕಿಸರು
ಶ್ರೀ ಮದ್ಭಗವದ್ಗೀತಾ : 27 ಶ್ರೀ ಭಗವಾನುವಾಚ: 11.ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ। ಗತಾಸೂನ ಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ॥ ಶ್ರೀಭಗವಾನ್ = ಶ್ರೀಕೃಷ್ಣನು, ಉವಾಚ = ಹೇಳಿದನು. ತ್ವಂ = ನೀನು, ಅಶೋಚ್ಯಾನ್ = ಶೋಕಕ್ಕೆ ತಕ್ಕವರಲ್ಲದವರನ್ನು ಕುರಿತು, ಅನ್ವಶೋಚಃ = ಶೋಕಿಸಿದ್ದೀಯೆ. ಚ = ಮತ್ತು, ಪ್ರಜ್ಞಾವಾದಾನ್ = ಜ್ಞಾನವಂತರು ಆಡುವ ಮಾತುಗಳನ್ನು, ಭಾಷಸೇ = ಆಡುತ್ತಿದ್ದೀಯೆ. ಪಂಡಿತಾಃ = ಜ್ಞಾನವಂತರು, ಗತಾಸೂನ್ = ಪ್ರಾಣಗಳನ್ನು ಕಳೆದುಕೊಂಡವರನ್ನೂ, ಅಗತಾಸೂನ್-ಚ = ಪ್ರಾಣಗಳನ್ನು ಕಳೆದುಕೊಳ್ಳದಿರುವವರನ್ನೂ, ಕುರಿತು, ನ-ಅನುಶೋಚಂತಿ= ಶೋಕಿಸರು….