ಪುಷ್ಯ ಮಾಸದ ವಿಶೇಷತೆ ಹಾಗೂ ಪರ್ವ ದಿನಗಳು
ಪುಷ್ಯಮಾಸ ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹತ್ತನೇ ಮಾಸ. ಇದನ್ನು ಪೌಷಮಾಸ, ತೈಷಮಾಸ ಎಂದೂ ಕರೆಯುತ್ತಾರೆ. ಹೇಮಂತ ಋತುವಿನ ಎರಡು ಮಾಸಗಳಲ್ಲಿ ಇದು ಎರಡನೆಯದು. ಧನುರ್ಮಾಸದ ಅಮಾವಾಸ್ಯೆಯ ಮಾರನೆಯ ದಿನ ಪ್ರಾರಂಭವಾಗಿ ಮಕರ ಮಾಸದ ಅಮಾವಾಸ್ಯೆಯ ದಿನ ಮುಗಿಯುತ್ತದೆ. ಪುಷ್ಯ ಮಾಸವು ಚಳಿಗಾಲದ (ಹೇಮಂತ ಮತ್ತು ಶಿಶಿರ ಋತುಗಳು) ಒಂದು ಮಾಸ. ಚಾಂದ್ರಮಾಸವಾದ ಪುಷ್ಯಮಾಸವು ಸೌರಮಾಸವಾದ ಧನುರ್ಮಾಸದೊಂದಿಗೆ ವ್ಯಾಪಿಸುತ್ತದೆ. ಪುಷ್ಯಯುಕ್ತಾ ಪೌರ್ಣಮಾಸೀ ಪೌಷೀಮಾಸೇತು ಯತಸಾ ನಾಮ್ನಾಸ ಪೌಷ್ಯಃ । ಎಂದು ಅಮರಸಿಂಹ ತಿಳಿಸಿರುವಂತೆ ಈ ಮಾಸದ ಹುಣ್ಣಿಮೆಯ…