
ಮೇಲುಕೋಟೆಯಲ್ಲಿ ಇಂದು ತೊಟ್ಟಿಲು ಮಡು ಜಾತ್ರೆ
ಇಂದು ಮೇಲುಕೋಟೆಯಲ್ಲಿ ತೊಟ್ಟಿಲು ಮಡಿಲು ಜಾತ್ರೆ ನಡೆಯಲಿದೆ. ಈ ಉತ್ಸವದ ವಿಶೇಷ ಎಂದರೆ ಬಹಳ ಕಾಲದಿಂದ ಮಕ್ಕಳಾಗದವರು ಅಥವ ಮದುವೆ ಆಗಿಲ್ಲದವರು ಹಿರಿಯರಿಂದ ಮುಡಿಪು ಕಟ್ಟಿಸಿಕೊಂಡು ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡಿ ಗಿರಿಪ್ರದಕ್ಷಿಣೆಯಿಂದ ಬೆಟ್ಟ ಹತ್ತಿ ಅಲ್ಲಿ ದೇವರ ನೈವೇದ್ಯ ಪೊಂಗಲ್ ಪ್ರಸಾದ ಸ್ವೀಕರಿಸುವುದರಿಂದ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಆಗುತ್ತದೆ. ಇದಕ್ಕೆ ಅಷ್ಟ ತೀರ್ಥ ಸ್ನಾನ ಎಂದು ಕರೆಯುತ್ತಾರೆ. ಮೊದಲಿಗೆ ಚೆಲುವನಾರಾಯಣ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಚೆಲುವನಾರಾಯಣ ಸ್ವಾಮಿಯನ್ನು ಕಲ್ಯಾಣಿಗೆ ಕೊಂಡೊಯ್ದು ಅಲ್ಲಿ ತೀರ್ಥ ಸ್ನಾನವಾದ…