ಲಕ್ಷ್ಮೀ ನಿವಾಸ : ಧಾರವಾಹಿಗಳು ಸಮಾಜದ ಸ್ವಾಸ್ತ್ಯ ಕಾಪಾಡಬೇಕು
ಜೀ ವಾಹಿನಿಯಲ್ಲಿ ಪ್ರತಿ ರಾತ್ರಿ 8 ರಿಂದ 9 ಗಂಟೆಯ ತನಕ ಲಕ್ಷ್ಮೀ ನಿವಾಸ ಧಾರವಾಹಿ ಪ್ರಸಾರವಾಗುತ್ತಲಿದ್ದು ಇತ್ತೀಚೆಗೆ ಖ್ಯಾತಿಯನ್ನು ಪಡೆಯುತ್ತಿದೆ. ಈ ಧಾರವಾಹಿಯಲ್ಲಿ ಜಯಂತ್ ಮತ್ತು ಜಾನವಿ ಎಂಬ ಪಾತ್ರವೂ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಅವರಿಬ್ಬರ ನಟನೆಯು ಬಹಳ ಚೆನ್ನಾಗಿದೆ. ಆದರೆ ಆ ಪಾತ್ರವನ್ನು ನೋಡುವವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬುದನ್ನು ಒಮ್ಮೆ ಯೋಚಿಸಬೇಕು. ಜಯಂತ್ ಪಾತ್ರವು ಒಂದು ಮಾನಸಿಕ ರೋಗಿಯ ಪಾತ್ರ. ಈ ರೀತಿಯ ಸಿನೆಮಾಗಳು ಬಹಳಷ್ಟು ಬಂದಿದೆ. ಆದರೆ ಸಿನಿಮಾ ಬರಿ…