MP ಕವನ ಸಂಗ್ರಹ : ನವ ವರುಷದಲ್ಲಿ – ಕವಿಯಿತ್ರಿ ಆಶಾಲತ
ನವ ವರುಷದಲ್ಲಿ ಓ ದಯಮಯಿ ಭಗವಂತನೆ ಈ ನವ ವರುಷದಲ್ಲಿ ಮರಣ ಮೃದಂಗವ ಬಾರಿಸದಿರು ಒಳ್ಳೊಳ್ಳೆಯ ಮರಗಳ ಕಡಿದು ಮನೆ – ಮನಗಳ ಮಸಣವ ಮಾಡದಿರು ಬಾಳೆoಬ ಗುಡಿಗೆ ಬೆಳಕಾಗಬೇಕಿರುವ ಜೀವಗಳ ನಂದಿಸದಿರು ಜೀವನ ಸಂಧ್ಯೆಯಲ್ಲಿರುವ ಮಾಗಿದ ಜೀವಗಳಿಗೆ ಆಸರೆಯಾಗ ಬೇಕಿರುವ ಚೈತನ್ಯದ ಚಿಲುಮೆಗಳ ಬತ್ತಿಸದಿರು ||1|| ಓ ನಿರಾಕಾರ ಸ್ವರೂಪನೆ ಆಳೆತ್ತರದ ಗುಡ್ಡಗಳ ಕೆಡವಿ ಸಹಸ್ರಾರು ಜೀವಗಳ ಜೀವಂತ ಸಮಾಧಿಯ ಮಾಡದಿರು ಬಿರುಮಳೆ ಎಂದು ಸಂಭ್ರಮಿಸ ಬೇಕಾದ ಜೀವಗಳ ಘೋರ¢ ನೆನಪುಗಳ ಸುಳಿಯಲ್ಲಿ ಸಿಲುಕಿಸ ದಿರು…