ಕರ್ನಾಟಕ ಮರುಚುನಾವಣೆ – 3 ಕ್ಷೇತ್ರದಲ್ಲಿ ಮತದಾನ ಆರಂಭ

ಮರುಚುನಾವಣೆಯಲ್ಲಿ 9 ಗಂಟೆತನಕ 10 % ಮತದಾನ ಕರ್ನಾಟಕದ 3 ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲು ಬಿರುಸಿನ ಮತದಾನ ನಡೆಯುತ್ತಿದೆ. ವೃದ್ಧರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವುದು ಯುವ ಜನತೆಯನ್ನು ಆಹ್ವಾನ ಮಾಡುತ್ತಿರುವಂತಿದೆ. ಮಾಜಿ ಪ್ರಧಾನಿ , ಮಾಜಿ ಮುಖ್ಯಮಂತ್ರಿ , ಕೇಂದ್ರ ಮಂತ್ರಿ , ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ , ಮಂತ್ರಿಗಳು, ಶಾಸಕರು, ಸಂಸದರು ಚುನಾವಣೆ ಪ್ರಚಾರ ಮಾಡುತ್ತಿದ್ದದ್ದನ್ನು ನೋಡಿದ್ದೇವೆ. ಮತದಾರರು ಯಾರ ಕೆೈ ಹಿಡಿಯುತ್ತಾರೆ 20 ನೇ ತಾರೀಖು ತಿಳಿಯುತ್ತದೆ.

Read More

ಸಂಪಾದಕೀಯ : ರಾಜಕೀಯ – ಭರವಸೆಯ ರಾಜಕಾರಣಿ ಇಲ್ಲವೋ ಅಥವಾ ಚಿವುಟುತ್ತಿದ್ದಾರೋ ?

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಪ್ರಚಾರವು ಬರದಿಂದ ಸಾಗುತ್ತಿದೆ . ಆದರೆ ಚುನಾವಣೆ ಆರಂಭವಾಗುವ ಮುನ್ನ ಅಭ್ಯರ್ಥಿಯನ್ನು ಆರಿಸುವುದು ಎರೆಡೂ ದೊಡ್ಡ ಪಕ್ಷಗಳಿಗೂ ಸವಾಲಾಗಿತ್ತು. ಹೇಳಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷ. ಆದರೆ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆರಿಸಲು ಎರೆಡು ಪಕ್ಷಗಳು ಒಂದೇ ಅಭ್ಯರ್ಥಿಗೆ ಹಗ್ಗ ಜಗ್ಗಾಟ ನಡೆಸುವಂತಾಯಿತು. ಲಕ್ಷಕ್ಕಿಂತಲೂ ಮೀರಿ ಇರುವ ಮತದಾರರ ಕ್ಷೇತ್ರದಲ್ಲಿ ಒಬ್ಬರೇ ಒಬ್ಬ ಅಭ್ಯರ್ಥಿ ಸಿಗುವುದು ಇಷ್ಟೊಂದು ಕಷ್ಟ ಕರ ಸಂಗತಿ ಎನ್ನುವುದು ವಿಪರ್ಯಾಸ. ಚನ್ನಪಟ್ಟಣ ಚುನಾವಣಾ ಅಭ್ಯರ್ಥಿಯನ್ನು…

Read More