ಶ್ರೀ ಮದ್ಭಗವದಚಗೀತಾ : 16
ಅರ್ಜುನ ಉವಾಚ:
ಸೇನಯೋ ರುಭಯೋರ್ಮಧ್ಯೆ ರಥಂ ಸ್ಥಾಪಯ ಮೇಚ್ಯುತ !!
22.ಯಾವದೇತಾನ್ ನಿರೀಕ್ಷೆಽಹಂ ಯೋದ್ದು ಕಾಮಾನವಸ್ಥಿತಾನ್ |
ಕೈರ್ಮಯಾ ಸಹಯೋದ್ಧವ್ಯಂ ಅಸ್ಮಿನ್ ರಣಸಮುದ್ಯಮೇ।।
ಅರ್ಜುನಃ = ಅರ್ಜುನನು, ಉವಾಚ = ಹೇಳಿದನು. ಅಚ್ಯುತ = ಓ ಶ್ರೀಕೃಷ್ಣನೆ!, ಅಸ್ಮಿನ್= ಈ, ರಣಸಮುದ್ಯಮೇ = ಯುದ್ಧಪ್ರಯತ್ನದಲ್ಲಿ, ಮಯಾ = ನನ್ನಿಂದ, ಕೈ:-ಸಹ = ಯಾರ ಜೊತೆಯಲ್ಲಿ, ಯೋದ್ಧವ್ಯಂ = ಯುದ್ಧ ಮಾಡಬೇಕಾಗಿದೆಯೋ ಅಂತಹ, ಅವಸ್ಥಿತಾನ್ = ನಿಂತಿರುವ, ಯೋದ್ದು ಕಾಮಾನ್ = ಯುದ್ಧೋತ್ಸಾಹಿಗಳಾದ, ಏತಾನ್ = ಈ ವೀರರನ್ನು, ಯಾವತ್= ಎಲ್ಲಿಯವರೆಗೂ, ಅಹಂ-ನಿರೀಕ್ಷೆ = ನಾನು ನೋಡುವೆನೋ, (ತಾವತ್) = (ಅಲ್ಲಿಯವರೆಗೂ), ಮೇ = ನನ್ನ, ರಥಂ = ರಥವನ್ನು, ಉಭಯೋಃ = ಎರಡೂ, ಸೇನಯೋಃ = ಸೈನ್ಯಗಳ, ಮಧೈ= ನಡುವೆ, ಸ್ಥಾಪಯ = ನಿಲ್ಲಿಸು.
ಅರ್ಜುನನು ಹೇಳಿದನು:-
ಓ ಅಚ್ಯುತನೆ! (ನಾಶವಿಲ್ಲದ ಶ್ರೀಕೃಷ್ಣನೆ!) ಒಂದುಸಲ ನನ್ನ ರಥವನ್ನು ಈ ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು. ಏಕೆಂದರೆ, ಇಲ್ಲಿ ಯುದ್ಧಕ್ಕಾಗಿ ನಿಂತಿರುವ ಈ ಮಹಾವೀರರನ್ನು ಒಮ್ಮೆ ತೀಕ್ಷವಾಗಿ ಪರಿಶೀಲಿಸಿ ನಾನು ಯಾರೊಡನೆ ಯುದ್ಧ ಮಾಡಬೇಕೋ, ನನ್ನೊಡನೆ ಯಾರು ಯುದ್ಧಕ್ಕಾಗಿ ಧುಮುಕುವರೋ ನೋಡುವೆನು.
23.ಯೋತ್ಮಮಾನಾನವೇಕ್ಷೇಽಹಂ ಯ ಏತೇsತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃ ಯುದ್ಧ ಪ್ರಿಯಚಿಕೀರ್ಷವಃ||
ದುರ್ಬುದ್ದೇಃ = ಕೆಟ್ಟಬುದ್ಧಿಯುಳ್ಳ, ಧಾರ್ತರಾಷ್ಟ್ರಸ್ಯ = ದುರ್ಯೋಧನನಿಗೆ, ಯುದ್ದೇ = ಯುದ್ದದಲ್ಲಿ, ಪ್ರಿಯಚಿಕೀರ್ಷವಃ = ಪ್ರಿಯವನ್ನುಂಟುಮಾಡಬಯಸುವ, ಯೇ-ಏತೇ = ಯಾವ ಇವರುಗಳು, ಅತ್ರ = ಈ ಯುದ್ಧರಂಗದಲ್ಲಿ, ಸಮಾಗತಾಃ = ಬಂದು ಸೇರಿ ಇರುವರೋ, ಯೋತ್ಸಮಾನಾನ್ = ಅಂತಹ ಕಾದಾಡಲಿರುವವರನ್ನು, ಅಹಂ = ನಾನು, ಅವೇಕ್ಷೇ = ನೋಡುವೆನು.
ದುರ್ಯೋಧನನು ದುಷ್ಟಬುದ್ದಿ ಎಂದು ತಿಳಿದಿದ್ದರೂ ಆತನ ಪ್ರೀತಿಗೋಸ್ಕರ ಯುದ್ಧ ಮಾಡಬಯಸಿ ಯಾರು ಯಾರು ಇಲ್ಲಿ ನಿಂತು ಇರುವರೋ, ಅವರೆಲ್ಲರನ್ನೂ ನಾನು ಒಂದು ಸಲ ಪರಿಶೀಲಿಸಿ ನೋಡುತ್ತೇನೆ.
ಸಂಜಯ ಉವಾಚ:
24. ಏವಮುಕ್ತೋ ಹೃಷೀಕೇಶಃ ಗುಡಾಕೇಶೇನ ಭಾರತ !। ಸೇನಯೋರುಭಯೋರ್ಮಧ್ಯೆ ಸ್ಥಾಪಯಿತ್ವಾ ರಥೋತ್ತಮಮ್ ||
25.ಭೀಷ್ಮ ದ್ರೋಣ ಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ ।
ಉವಾಚ ಪಾರ್ಥ! ಪಶ್ಯೈತಾನ್ ಸಮವೇತಾನ್ ಕುರೂನಿತಿ।।
ಸಂಜಯಃ = ಸಂಜಯನು, ಉವಾಚ = ಹೇಳಿದನು. ಭಾರತ = ಭರತವಂಶದಲ್ಲಿ ಹುಟ್ಟಿದ ಧೃತರಾಷ್ಟ್ರನೆ!, ಗುಡಾಕೇಶೇನ = ಅರ್ಜುನನಿಂದ, ಏವಂ = ಈ ವಿಧವಾಗಿ, ಉಕ್ತಃ = ಹೇಳಲ್ಪಟ್ಟ, ಹೃಷೀಕೇಶಃ = ಶ್ರೀಕೃಷ್ಣನು, ಉಭಯೋಃ = ಎರಡು, ಸೇನಯೋ = ಸೇನೆಗಳ, ಮಧ್ಯೆ = ಮಧ್ಯದಲ್ಲಿ, ಭೀಷ್ಮದ್ರೋಣ ಪ್ರಮುಖತಃ = ಭೀಷ್ಮದ್ರೋಣರ ಎದುರಿಗೆ, ಹಾಗೂ, ಸರ್ವೇಷಾಂ = ಎಲ್ಲಾ, ಮಹೀಕ್ಷಿತಾಂ-ಚ = ರಾಜರ ಎದುರಿಗೂ, ರಥೋತ್ತಮಂ = ಶ್ರೇಷ್ಠವಾದ ರಥವನ್ನು, ಸ್ಥಾಪಯಿತ್ವಾ = ನಿಲ್ಲಿಸಿ, ಪಾರ್ಥ = ಎಲೈ ಪಾರ್ಥನೆ! ಸಮವೇತಾನ್ ನೆರೆದಿರುವ, ಏತಾನ್ ಈ, ಕುರೂನ್ = ಕೌರವಪಕ್ಷದವರನ್ನು, ಪಶ್ಯ = ನೋಡು, ಇತಿ = ಎಂದು, ಉವಾಚ = ಹೇಳಿದನು.
ಸಂಜಯನು ಹೇಳಿದನು:-
ಅರ್ಜುನನ ಮಾತನ್ನು ಕೇಳಿದ ಶ್ರೀಕೃಷ್ಣನು, ಭೀಷ್ಮದ್ರೋಣರು, ಇತರ ಪ್ರಧಾನರಾಜರು ನೆರೆದಿರುವ ಸ್ಥಳಕ್ಕೆ ರಥವನ್ನು ತಂದು ಅವರೆದುರಿಗೆ ರಥವನ್ನು ನಿಲ್ಲಿಸಿ, “ಎಲೈ ಅರ್ಜುನನೆ! ಇಲ್ಲಿಗೆ ಬಂದು ಸೇರಿರುವ ಕೌರವಪಕ್ಷೀಯರೆಲ್ಲರನ್ನೂ ನೋಡು” ಎಂದನು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ