ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲುಗಳು*
ಕ್ರಿಸ್ಮಸ್ ಹಬ್ಬದ ನಂತರ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ನೈಋತ್ಯ ರೈಲ್ವೆ ಎಸ್ಎಸ್ಎಸ್ ಹುಬ್ಬಳ್ಳಿ – ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಮೂರು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಿದೆ..
ರೈಲು ಸಂಖ್ಯೆ 07367/07368 ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ವಿಶೇಷ (3 ಟ್ರಿಪ್ಗಳು)
ರೈಲು ಸಂಖ್ಯೆ 07367 ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ಎಕ್ಸ್ಪ್ರೆಸ್ ವಿಶೇಷ ರೈಲು ಡಿಸೆಂಬರ್ 30, ಜನವರಿ 06 ಮತ್ತು 13, 2025 ರಂದು ಸಂಜೆ 04:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ಇಂದ ಹೊರಟು ಮರುದಿನ ಮಧ್ಯಾಹ್ನ 3:20 ಕ್ಕೆ ಕನ್ಯಾಕುಮಾರಿಯನ್ನು ತಲುಪಲಿದೆ.
ರೈಲು ಸಂಖ್ಯೆ 07368 ಕನ್ಯಾಕುಮಾರಿ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ವಿಶೇಷ ರೈಲು ಡಿಸೆಂಬರ್ 31, 2024 ಮತ್ತು ಜನವರಿ 07 ಮತ್ತು 14, 2025 ರಂದು ಸಂಜೆ 07:10 ಕ್ಕೆ ಕನ್ಯಾಕುಮಾರಿಯಿಂದ ಹೊರಟು ಮರುದಿನ ಸಂಜೆ 07:35 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯನ್ನು ತಲುಪಲಿದೆ.
ಎರಡೂ ಮಾರ್ಗಗಳಲ್ಲಿ ಈ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತುಮಕೂರು, ಯಶವಂತಪುರ ಜಂಕ್ಷನ್, ಕೃಷ್ಣರಾಜಪುರ, ಬಂಗಾರಪೇಟೆ, ಸೇಲಂ ಜಂಕ್ಷನ್, ನಾಮಕ್ಕಲ್, ಕರೂರ್, ದಿಂಡಿಗಲ್ ಜಂಕ್ಷನ್, ಮಧುರೈ ಜಂಕ್ಷನ್, ವಿರುದುನಗರ ಜಂಕ್ಷನ್, ಸತೂರ್, ಕೋವಿಲ್ಪಟ್ಟಿ, ತಿರುನೆಲ್ವೇಲಿ ಜಂಕ್ಷನ್, ವಲ್ಲಿಯೂರ್ ಮತ್ತು ನಾಗರಕೋಯಿಲ್ ಜಂಕ್ಷನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಈ ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್ಸೈಟ್ಗೆ (www.enquiry.indianrail.gov.in) ಭೇಟಿ ನೀಡಿ, 139 ನಂಬರಗೆ ಡಯಲ್ ಮಾಡಿ ಅಥವಾ NTES ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
SOUTH WESTERN RAILWAY
*Vijayapura – Mangaluru Central daily express special train services extended with revised timings*
The Railway Board has approved the extension of the periodicity of Train No. 07377/07378 Vijayapura-Mangaluru-Vijayapura Daily Express Special will be extended with the revised timings, stoppages as detailed below:
1. Train No. 07377 Vijayapura- Mangaluru Central Daily Express Special will continue its service from January 01 to June 30 2025. Earlier, this train was notified to run up to December 31, 2024.
2. Train No. 07378 Mangaluru Central – Vijayapura Daily Express Special will continue its service from January 02 to July 01, 2025. Earlier, this train was notified to operate until January 01 2025.