ಎಸ್.ಎಂ, ಕೃಷ್ಣ ಅವರ ಅಗಲಿಕೆ –  ಮೈಸೂರು ನ ಅವಧೂತ ದತ್ತಪೀಠದ ಶ್ರೀ ಗಣಪತಿ ಶ್ರೀಗಳ ಸಂತಾಪ  

Spread the love

4 ,5 ದಶಕಗಳಿಂದ ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಎಸ್ಎಮ್ ಕೃಷ್ಣ ರವರು ಭಕ್ತರಾಗಿ ಆಶ್ರಮಕ್ಕೆ ಆಗಮಿಸುತ್ತಿದ್ದರು

ಶ್ರೀ ಕೃಷ್ಣ ರವರು ಆಧ್ಯತ್ಮ ವಿಷಯಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದವರಾಗಿದ್ದು, ಪೂಜ್ಯ ಸ್ವಾಮೀಜಿಯವರೊಂದಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಎಂ. ಕೃಷ್ಣ ಅವರ ನಿಧಾನಕ್ಕೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಮುಕ್ತಿಗಾಗಿ ಪ್ರಾರ್ಥಿಸಿದ್ದಾರೆ.
ಶ್ರೀ ಕೃಷ್ಣರವವರು ನಲವತ್ತು ವರ್ಷಗಳಿಂದ ಮೈಸೂರಿನ ಅವಧೂತ ದತ್ತ ಪೀಠಕ್ಕೆ ಬರುತ್ತಿದ್ದರು ಹಾಗೂ ಸ್ವಾಮೀಜಿ ಅವರ ಬಗ್ಗೆ ಅಪಾರ ಭಕ್ತಿ ಗೌರವಗಳನ್ನು  ಹೊಂದಿದ್ದರು. .
ಕೃಷ್ಣ ರವರು ಈ ನಾಡು ಕಂಡ ಅಪ್ರತಿಮ ಹಾಗೂ ಅಪರೂಪ ನಾಯಕ. ಅವರ ಅವಧಿಯಲ್ಲಿ ಬೆಂಗಳೂರು ಹಾಗು ರಾಜ್ಯವು ಅಪಾರ ಅಭಿವೃದ್ಧಿ ಕಂಡು ಅವರ ದೀರ್ಘ ದೃಷ್ಟಿತ್ವ ಹಾಗೂ ನಾಯಕತ್ವಕ್ಕೆ ಸಾಕ್ಷಿಯಾಯಿತು.
ಶ್ರೀ ಕೃಷ್ಣ ರವರು ಆಧ್ಯತ್ಮ ವಿಷಯಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದವರಾಗಿದ್ದು, ಪೂಜ್ಯ ಸ್ವಾಮೀಜಿಯವರೊಂದಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು.
ಮೃತರ ಆತ್ಮಕ್ಕೆ ಶಾಂತಿ ಹಾಗು ಮುಕ್ತಿ ದೊರೆಯಲೆಂದು, ಹಾಗು ಬಂಧುವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪೂಜ್ಯ ಸ್ವಾಮೀಜಿಯವರು ಪ್ರಾರ್ಥಿಸುತ್ತಾರೆ.