ಭಾರತದಲ್ಲಿ ಮಹಾ ಕುಂಭಮೇಳ ಭಾರಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರು ಕುಂಭಮೇಳದಲ್ಲಿ ಮುಳುಗುವುದರಿಂದ ಬಡತನ ನಾಶವಾಗುವುದಿಲ್ಲ ಎಂಬ ಹೇಳಿಕೆಯನ್ನು ನೀಡಿ ಬಹು ಜನರ ನಂಬಿಕೆಗೆ ಘಾಸಿಯನ್ನುಂಟು ಮಾಡಿದ್ದರು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಆದರೆ ಕುಂಭಮೇಳದಲ್ಲಿ ಮುಳುಗಿ ಎದ್ದು ಜನರ ಬಡತನ ನಿವಾರಣೆ ಆಯಿತೋ ಇಲ್ಲವೋ ಗೊತ್ತಿಲ್ಲ, ಇಂತಹ ಜನಗಳ ಮನಸ್ಸಿನ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಯನ್ನು ನೀಡಿ ಕಾಂಗ್ರೆಸ್ ಪಕ್ಷವಂತು ದೆಹಲಿ ಚುನಾವಣೆಯಲ್ಲಿ ಸಂಪೂರ್ಣವಾಗಿ ಮುಳಗಿ ಹೋಯಿತು. ದೇಶದ ರಾಜಧಾನಿ ದೆಹಲಿಯಂತಹ ಸ್ಥಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವು ಒಂದೇ ಒಂದು ಸೀಟನ್ನು ಗಳಿಸುವಲ್ಲಿ ವಿಫಲವಾಗಿದೆ. ಇನ್ನು ಮುಂದಾದರು ಕಾಂಗ್ರೆಸ್ ಪಕ್ಷದ ಪಕ್ಷದ ನಾಯಕರು ಕೊಡುವ ಹೇಳಿಕೆಗಳ ಬಗ್ಗೆ ಗಮನಿಸದಿದ್ದರೆ ಪಕ್ಷವು ಮತ್ತಷ್ಟು ಅದೋಗತಿಗೆ ಇಳಿಯುವುದರಲ್ಲಿ ಸಂದೇಹವಿಲ್ಲ ಎಂಬುವುದು ಬಹಳಷ್ಟು ಜನರ ಅಭಿಪ್ರಾಯ ಹಾಗೂ ಕಣ್ಣಿಗೆ ಕಾಣಿಸುತ್ತಿರುವ ಸತ್ಯ ಎಂದು ಅನ್ನಿಸುತ್ತಿದೆ.