ಮೈಸೂರು :- ಸಂಖ್ಯೆ 51 ಅಗ್ರಹಾರ ವಾರ್ಡಿನ JSS ಆಸ್ಪತ್ರೆ ಬಳಿ ಇರುವ ಸರ್ಕಾರಿ ಜಾಗದಲ್ಲಿ ಸುಮಾರು ೧೫ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ೫ ಮಳಿಗೆ ಗಳನ್ನು ನಿನ್ನೆ ೧೮/೧೧/೨೦೦೪ ರ ಮಧ್ಯರಾತ್ರಿ ರೌಡಿಗಳ ಗುಂಪು ಏಕಏಕೀ ಬಂದು ಧ್ವಂಸಗೊಳಿಸಿದ್ದಾರೆ_
_ಇದನ್ನು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ_
_ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ ಕನ್ನಡಪರ ಹೋರಾಟಗಾರರು_
_ಈ ಜಾಗದ ವಿಷಯ ಈಗಾಗಲೇ ಅನೇಕ ವರ್ಷಗಳಿಂದ ಕೋರ್ಟ್ ನಲ್ಲಿ ಇದೆ ಈ ಜಾಗದಲ್ಲಿ ವ್ಯಾಪಾರ ಮಾಡುತ್ತ ಬಡಜನರು ಜೀವನ ನಡೆಸುತ್ತಿದ್ದಾರೆ_
ಈ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು ಜಾಗ ಕಬಳಿಸುವ ದೃಷ್ಟಿಯಿಂದ ರೌಡಿಗಳನ್ನು ಬಿಟ್ಟು ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಈಗಾಗಲೇ FIR ದಾಖಲಿಸಿರುವ_ _ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ,_