ನೈಋತ್ಯ ರೈಲ್ವೆ
*I. ಉಧ್ನಾ ನಿಲ್ದಾಣದಲ್ಲಿ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಸಮಯ ಪರಿಷ್ಕರಣೆ*
ಸೂರತ್ ನಿಲ್ದಾಣ ಅಭಿವೃದ್ಧಿ ಕಾರ್ಯ-ಹಂತ 2 (ಪ್ಲಾಟ್ ಫಾರ್ಮ್ 02 ಮತ್ತು 03ರ ಬ್ಲಾಕ್) ಗೆ ಸಂಬಂಧಿಸಿದಂತೆ ಏರ್ ಕಾನ್ಕೋರ್ಸ್ ಕಾಮಗಾರಿದಿಂದಾಗಿ ಉದ್ನಾ ಜಂಕ್ಷನ್ ನಲ್ಲಿ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲಿನ ಆಗಮನ, ನಿರ್ಗಮನ ಸಮಯವನ್ನು ಪಶ್ಚಿಮ ರೈಲ್ವೆಯು ಪರಿಷ್ಕರಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ, ಈ ರೈಲು ಉಧ್ನಾ ಜಂಕ್ಷನ್ಗೆ 15:23 ಗಂಟೆಯ ಬದಲು 15:13 ಗಂಟೆಗೆ ಆಗಮಿಸಿ, 15:28 ಗಂಟೆಯ ಬದಲಾಗಿ 15:18 ಗಂಟೆಗೆ ಹೊರಡಲಿದೆ.
*II. ರೈಲುಗಳ ಸಂಚಾರ ಭಾಗಶಃ ರದ್ದು / ನಿಯಂತ್ರಣ*
ಕೃಷ್ಣರಾಜನಗರ ನಿಲ್ದಾಣದ ರಸ್ತೆ ಸಂಖ್ಯೆ 2ರ ಎರಡೂ ಬದಿಗಳಲ್ಲಿ ಟ್ರ್ಯಾಕ್ ಮೆಷಿನ್ ಸೈಡಿಂಗ್ ಅನ್ನು ನಿಯೋಜಿಸಲು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ:
*ರೈಲುಗಳ ಸಂಚಾರ ಭಾಗಶಃ ರದ್ದು:*
1. ಜನವರಿ 28 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಹಾಸನ ಮತ್ತು ಮೈಸೂರು ನಿಲ್ದಾಣಗಳ ಮಧ್ಯ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
2. ಜನವರಿ 29 ರಂದು ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದೆ.
3. ಜನವರಿ 28 ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
4. ಜನವರಿ 29 ರಂದು ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಂಡಿದೆ. ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
*ರೈಲುಗಳ ನಿಯಂತ್ರಣ:*
1. ಜನವರಿ 26 ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರವನ್ನು ನಿಯಂತ್ರಿಸಲಾಗುವುದು.
2. ಜನವರಿ 29 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16207 ಯಶವಂತಪುರ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿತವಾಗಿರುತ್ತದೆ.
SOUTH WESTERN RAILWAY
16.01.2025
*I. Revision in Timings of Humsafar Express at Udhna Station*
Western Railway has revised the arrival and departure timings of Train No. 19668 Mysuru–Udaipur City Weekly Humsafar Express at Udhna Junction due to air concourse work in connection with the ‘Surat Station Development Work – Phase II’ (block of platforms 02 and 03).
Accordingly, this train will arrive at Udhna Junction at 15:13 hrs instead of 15:23 hrs and depart at 15:18 hrs instead of 15:28 hrs, with immediate effect.
*II. Partial Cancellation / Regulation of trains*
Due to engineering works at Krishnarajanagar station for the commissioning of track machine siding on both sides of Road No. 2. Consequently, the following changes will be made to train services:
*Partial Cancellation of trains:*
1. Train No. 56267 Arsikere-Mysuru Daily Passenger, journey commencing on January 28, 2025, will be partially cancelled between Hassan and Mysuru and will be short-terminated at Hassan.
2. Train No. 56268 Mysuru-Arsikere Daily Passenger, journey commencing on January 29, 2025, will be partially cancelled between Mysuru and Hassan. It will originate from Hassan instead of Mysuru at its scheduled departure time from Hassan.
3. Train No. 16225 Mysuru-Shivamogga Town Daily Express, journey commencing on January 28, 2025, will be partially cancelled between Mysuru and Hassan. It will originate from Hassan instead of Mysuru at its scheduled departure time from Hassan.
4. Train No. 16226 Shivamogga Town-Mysuru Daily Express, journey commencing on January 29, 2025, will be partially cancelled between Hassan and Mysuru and will be short-terminated at Hassan.
*Regulation of trains:*
1. Train No. 16221 Talguppa-Mysuru Kuvempu Daily Express, journey commencing on January 26, 2025, will be regulated for 45 minutes enroute.
2. Train No. 16222 Mysuru-Talguppa Kuvempu Daily Express, journey commencing on January 26, 2025, will be regulated for 45 minutes enroute.
3. Train No. 16207 Yesvantpur-Mysuru Daily Express, journey commencing on January 29, 2025, will be regulated for 30 minutes enroute.