ಮೈಸೂರು ಪತ್ರಿಕೆ ಮತ್ತು ಎಸ್ಎಂ ಕೃಷ್ಣ

Spread the love

ಇಂದು ನಸುಕಿನಲ್ಲಿ ನಿಧನರಾದ ಧೀಮಂತ ರಾಜಕಾರಣಿ ಎಸ್ಎಂ ಕೃಷ್ಣರವರು ‘ಮೈಸೂರು ಪತ್ರಿಕೆ’
ಯೊಂದಿಗೆ ಅತ್ಯಂತ ಸಮೀಪದ ಒಡನಾಟ ಹೊಂದಿದವರಾಗಿದ್ದರು, ಮೈಸೂರಿನ ತಮ್ಮ ವ್ಯಾಸಂಗ ಕಾಲದಿಂದ ಮೈಸೂರು ಪತ್ರಿಕೆಯೊಂದಿಗೆ ವಿವಿಧ ರೀತಿಯಲ್ಲಿ ಸಂಪರ್ಕದೊಂದಿಗಿದ್ದ ಕೃಷ್ಣಾರವರು ಹಲವು ಬಾರಿ ಸಂಸ್ಥಾಪಕರಾದ ಟಿ ನಾರಾಯಣ ಮತ್ತು ನಂತರ ಸಂಪಾದಕರಾಗಿದ್ದ ದಿವಂಗತ ಟಿ ವೆಂಕಟರಾಮ್ ರವರನ್ನು ಹಲವಾರು ಸಂದರ್ಭಗಳಲ್ಲಿ ನೆನೆಯುತ್ತಿದ್ದದ್ದು ಉಂಟು, ತಾವು ವಿದ್ಯಾಭ್ಯಾಸದಿಂದ ರಾಜಕೀಯಕ್ಕೆ ಪದರ್ಪಣ ಮಾಡಿದಾಗಿ ನಿಂದಲೂ ಪತ್ರಿಕೆ ಹಲವು ರೀತಿಯಲ್ಲಿ ನನಗೆ ಸಹಾಯಕವಾಗಿದೆ ನಾನು ಎಂದೂ ಈ ಮಹನೀಯರನ್ನು ಮರೆಯಲಾಗುವುದಿಲ್ಲ ಎಂದು ಹಲವಾರು ಸಭೆ ಸಮಾರಂಭಗಳಲ್ಲಿ ತಿಳಿಸುತ್ತಿದ್ದರು, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಪರಮಭಕ್ತರಾಗಿದ್ದ ಕೃಷ್ಣರವರು ಪತ್ರಿಕೆಯ ಸಂಪಾದಕರೊಂದಿಗೆ ಹಲವಾರು ಬಾರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಪ್ರಸಕ್ತ ವಿದ್ಯಾಮಾನಗಳನ್ನು ಚರ್ಚಿಸಿ ಸಲಹೆ ಪಡೆಯುತ್ತಿದ್ದರು, ರಾಜ್ಯ ದೇಶ ಹಾಗೂ ವಿದೇಶಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾ ಪು ಮೂಡಿಸಿದ ಎಸ್ಎಂ ಕೃಷ್ಣರವರು ಅತ್ಯಂತ ಅಪರೂಪದ ರಾಜಕಾರಣಿಯಾಗಿದ್ದರು ವಿದ್ಯೆಯ ಜೊತೆ ವಿನಯ, ನಮ್ರತೆ ಇವರಿಗೆ ಹಾಸು ಹೊಕ್ಕಾಗಿತ್ತು, ಮೈಸೂರು ಪತ್ರಿಕೆ ಆಡಳಿತ ವರ್ಗ ಎಸ್ಎಂ ಕೃಷ್ಣ ರವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅವರ ಕುಟುಂಬ ವರ್ಗದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲೆಂದು ಪ್ರಾರ್ಥಿಸುವುದು- ಸಂ