ಮುಖ್ಯಮಂತ್ರಿಗಳಿಂದ ಮಂಡ್ಯ ಜಿಲ್ಲೆ ಪ್ರವಾಸ ಕಾರ್ಯಕ್ರಮ

Spread the love

ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 4 ರಂದು (ನಾಳೆ) ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 10:50 ಕ್ಕೆ ಕೆ.ಆರ್ ಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಬಂಡಬೋಯಿನಹಳ್ಳಿ ಗ್ರಾಮಕ್ಕೆ ಹೆಲಿಕಾಪ್ಟರ್ ಮೂಲಕ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.

ಬೆಳಿಗ್ಗೆ 11.50 ಕ್ಕೆ ಕೆ.ಆರ್ ಪೇಟೆ ತಾಲೂಕಿನ ಕಿಕ್ಕೇರಿ ಹಳ್ಳಿ ಕೋಡಿಮಾರನಹಳ್ಳಿಯಲ್ಲಿ ಲಕ್ಷ್ಮೀದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ (ರಿ), ಕೋಡಿಮಾರನಹಳ್ಳಿ ಇವರ ವತಿಯಿಂದ ಆಯೋಜಿಸಿರುವ ಶ್ರೀ ಲಕ್ಷ್ಮೀದೇವಿ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 11.55 ಕ್ಕೆ ಕೆ.ಆರ್ ಪೇಟೆ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ನೂತನ ಶ್ರೀ ಕೆ.ಎನ್ ಕೆಂಗೇಗೌಡ ರೈತ ಸಹಕಾರ ಭವನದ ಬ್ಯಾಂಕಿAಗ್ ಶಾಖೆ, ಗೊಬ್ಬರದ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮದ್ಯಾಹ್ನ 2:30 ಗಂಟೆಗೆ ಕೆ.ಆರ್ ಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಬಂಡಬೋಯಿನಹಳ್ಳಿ ಗ್ರಾಮದಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಅವರು