ಮೂಡ-ಸಾರ್ವಜನಿಕರ ಕುಂದು ಕೊರತೆ ನಿವಾರಿಸಲು ಜನಸ್ಪಂದನ
ಮೈಸೂರು,- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾರ್ವಜನಿಕ ಅನುಕೂಲವಾಗಲು ನಾಗರಿಕರ ಕುಂದು ಕೊರತೆಗಳನ್ನು ದಾಖಲಿಸಲು ಸಮಗ್ರ ವೇದಿಕೆ ನೆರವಿಗಾಗಿ ‘ಜನಸ್ಪಂದನ ಎಂಬ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಜನಸ್ಪಂದನವು ಸರ್ಕಾರದ ಯಾವುದೇ ಸೇವೆ ಅಥವಾ ಯೋಜನೆಯನ್ನು ಪಡೆಯುವಲ್ಲಿ ಯಾವುದೇ ವಿಳಂಬ ನಿರಾಕರಣೆ ತೊಂದರೆ ಉಂಟಾದಲ್ಲಿ ದೂರು ದಾಖಲಿಸುವುದು. ವೆಬ್ ಪೋರ್ಟಲ್ ಮೊಬೈಲ್ ಆ್ಯಪ್ ಸಹಾಯವಾಣಿ 1902 ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಕುಂದು ಕೊರತೆ ಅಥವಾ ದೂರನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ದೂರು ದಾಖಲಾದ ಕೂಡಲೇ ನಾಗರಿಕರಿಗೆ ಸ್ವೀಕೃತಿ ಸಂದೇಶ ರವಾನೆ. ಸಂಬoಧಪಟ್ಟ ಇಲಾಖೆಯ ಕ್ಷೇತ್ರ ಅನುಷ್ಠಾನಾಧಿಕಾರಿಗೆ ನಿವಾರಣೆ ಕ್ರಮ ವಹಿಸಲು ಕುಂದು ಕೊರತೆ ಅರ್ಜಿಯ ರವಾನೆ. ನಿಗದಿತ ಅವಧಿಯಲ್ಲಿ ಕುಂದು ಕೊರತೆ ನಿವಾರಣೆಗೆ ಕ್ರಮ. ಕಾಲಾವಧಿ ಮೀರಿದರೆ ಸ್ವಯಂ ಚಾಲಿತವಾಗಿ ಮೇಲಾಧಿಕಾರಿಗೆ ಕುಂದು ಕೊರತೆಯ ವರ್ಗಾವಣೆ ಹಾಗೂ ಕುಂದು ಕೊರತೆ ನಿವಾರಣೆ ತೃಪ್ತಿಕರವಾಗಿರುವ ಕುರಿತು ನಾಗರಿಕರ ಅಭಿಪ್ರಾಯ ಸಂಗ್ರಹಣೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ನಾಗರೀಕರಿಗೆ ಕುಂದು ಕೊರತೆ ಕಂಡುಬoದಲ್ಲಿ ಸಹಾಯವಾಣಿ ಸಂಖ್ಯೆ:1902, ವೆಬ್ ಪೋರ್ಟಲ್ https://ipgrs.karnataka.gov.in ಅಥವಾ ಮೊಬೈಲ್ ಆ್ಯಪ್ ಮೂಲಕ ಸಮಸ್ಯೆಯನ್ನು ದಾಖಲಿಸಬಹುದಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.