ಸೃಷ್ಟಿಯ ಸೊಬಗು
ಏನಿದು ಸೃಷ್ಟಿಯ ಸೊಬಗು
ಎಲ್ಲಿ ನೋಡಿದರಲ್ಲಿ ಹಸಿರು
ಸಿರಿಯ ಹೊನಲು
ಓ ಮು ನ್ನರ್ ಎಂಬ ಸೌಂದರ್ಯದ
ಅಧಿ ದೇವತೆಯೇ
ಬನ್ನಿಸಲಸದಳ ನಿನ್ನಯ ಚೆಲುವು
ಸುತ್ತಲೂ ಎತ್ತೆತ್ತಲು ಹಸಿರಿನ ಹೊದಿಕೆ
ಹಸಿರು ಸೀರೆಯುಟ್ಟು ಕಂಗೊಳಿಸಿರುವೆ
ಸ್ವರ್ಗವೇ ಧರೆಗಿಳಿದು ಬಂದತಿದೆ ||1||
ಓ ಮುನ್ನರ್ ಎಂಬ ಚೆಲುವಿನ
ಐಸಿರಿಯೆ
ನೋಡುಗರ ಕಣ್ಮನ ಸೆಳೆದಿರುವೆ ಜಗದ ಚೆಲುವೆಲ್ಲವೂ ಅಡಕವಾಗಿ
ನಿಂದಿರುವೆ
ನಿನ್ನ ಬಣ್ಣಿಸಲು ಪದಗಳಿಲ್ಲ ಎನ್ನಲಿ ಒತ್ತಡದ ಬದುಕಿನಿಂದ ಬೇಸತ್ತ ಮನಗಳಿಗೆ
ಸಂತಸ, ಆಹ್ಲಾದವ ನೀಡಿರುವೆ ||2||
ಓ ಮುನ್ನರ್ ಎಂಬ ಅಂದದ ಗಣಿಯೇ
ಸಪ್ತ ಸಾಗರಗಳ ದಾಟಿ ಬರುವರು ನಿನ್ನ ಸೌಂದರ್ಯವ ಅಸ್ವಾದಿಸಲು ಜಂಜಾಟದ ಬದುಕಿನಿಂದ ಮುಕ್ತಿ ಹೊಂದಲು
ದುಃಖ -ದುಮ್ಮಾನಗಳು ತುಂಬಿದ ಜೀವಗಳಿಗೆ ಸಾಂತ್ವನದ ತಂಪನೆರೆಯುವೆ
ಹಚ್ಚ ಹಸಿರಿನ ಸೊಬಗಿನಿಂದ ಸ್ವಾಗತವ ನೀಡಿ ಎಲ್ಲರ ಹೃದಯವ
ಸೂರೆಗೊಂಡಿರುವೆ ||3||
ಓ ಮುನ್ನಾರ್ ಎಂಬ ಚೆಲುವಿನ
ಅರಸಿಯೇ,
ಹಸಿರೇ ಉಸಿರು, ಹಸಿರೇ ನಮ್ಮ ನಾಡಿನ ಐಸಿರಿಯು
ಹಸಿರ ಸಿರಿಯ ಉಳಿಸಿರಿ
ಪ್ರಕೃತಿಯ ಆರಾಧಿಸಿರಿ
ಮಾನವ ಸಂಕುಲವ ರಕ್ಷಿಸಿರಿ ಎಂಬ ಸಂದೇಶವ ಮನುಕುಲಕ್ಕೆ ನೀಡಿರುವೆ ||4||
ರಚನೆ :
ಎಂ. ಎಸ್. ಆಶಾಲತಾ
ಶಿವೆಸುತೆ ( ಚನ್ನಪಟ್ಟಣ )
ಶಾಖಾ ವ್ಯವಸ್ಥಾಪಕರು
ಎಂ. ಡಿ. ಸಿ. ಸಿ. ಬ್ಯಾಂಕ್
ಕೆ. ಹೊನ್ನಲಗೆರೆ