MP ಕವನ ಸಂಗ್ರಹ : ” ಸಿರಿಧಾನ್ಯಗಳ ಐಸಿರಿ” – ಕವಿಯಿತ್ರಿ ಆಶಾಲತ

Ashalatha
Spread the love

“ಸಿರಿಧಾನ್ಯಗಳ ಐಸಿರಿ “

ಓ ಸಿರಿಧಾನ್ಯಗಳೆoಬ ಆರೋಗ್ಯ ದೇವತೆಯೇ
ನಿನ್ನ ಮಹಿಮೆ ಅಪಾರ ಬಣ್ಣಿಸಲು
ಪದಗಳಿಲ್ಲ ಎನ್ನಲಿ
ಕೋಟಿ, ಕೋಟಿ ವೈದ್ಯರಿಗೂ ಸಾಟಿ ಯಾಗದ ವೈದ್ಯ ಸಂಜೀವಿನಿ ನೀನು
ನಿನ್ನ ಮೌಲ್ಯವನರಿಯದೆ ಬದುಕು
ನಡೆಸುತ್ತಿರುವೆವು ನಾವು ||1||

ಓ, ಸಿರಿಧಾನ್ಯ ಗಳೆoಬ ಆರೋಗ್ಯ ವರ್ಧನಿಯೇ
ಆಕಾರದಲ್ಲಿ ವಾಮನನಾದರೂ
ಸಾಕಾರದಲ್ಲಿ ತ್ರಿವಿಕ್ರಮ ನಂತೆ
ನಿನ್ನ ಉಪಯೋಗಿಸಿದರೆ ಆರೋಗ್ಯದ ಲಾಭಗಳು ನೂರಾರು
ನವಣೆ ಬಳಸಿ ಬವಣೆ ನೀಗಿರೆಂದು
ನೀ ಸಾರುವೆ
ಊದಲು ಬಳಸಿ ಉಬ್ಬಸ ನೀಗಿರೆಂದು ನೀ ಪ್ರತಿಧ್ವನಿಸುವೆ
ಬರಗ ಬೆಳೆದು ಬರಗಾಲ ನೀಗಿರೆಂದು
ಕೊರೆಲೆಯಿಂದ ಕೊರಡು ಚಿಗುವುರುವುದೆಂದು ನೀ ಮಾರ್ಧನಿಸುವೆ
ಹಾರಕ ಸೇವೆಸಿ ಸಧೃಢ ಕಾಯರಾಗಿ
ಸಜ್ಜೆ ತಿಂದು ನವಯೌವ್ವನಿಗರಾಗಿ
ರಾಗಿಯುoಡು ನಿರೋಗಿಯಾಗಿರೆಂದು ನಿನ್ನ ಮಹಿಮೆಯ ಸಾರುವೆ ||2||

ಓ ಸಿರಿಧಾನ್ಯವೆಂಬ ಜೀವ ಸಂಜೀವಿನಿಯೇ ಧಾನ್ಯಗಳ
ಸಿರಿದೇವತೆ ನೀನಾಗಿರುವೆ
ಸಕಲ ಪೋಷಕಾoಶಗಳ ಆಗರ
ನೀನಾಗಿರುವೆ
ನಿನ್ನ ನಿರ್ಲಕ್ಷಿಸಿ ಭವರೋಗಗಳಿಗೆ
ಈಡಾಗಿರುವವರು ಇಂದಿನ ಜನರು
ಆಹಾರ ದಲ್ಲಿ ನಿನ್ನ ಉಪಯೋಗಿಸಿ
ಶತಾಯುಷಿಗಳಾಗಿದ್ದರು ನಮ್ಮ ಪೂರ್ವಿಕರು
ಆರೋಗ್ಯದ ಅಕ್ಷಯ ದೇವತೆ
ನೀನಾಗಿರುವೆ ||3||

ಓ, ಸಿರಿಧಾನ್ಯವೆಂಬ ವೈಧ್ಯ ಶಿರೋಮಣಿಯೇ
ರಕ್ತನಾಳಗಳ ಶುದ್ದಿ ಕಾರಕಿ
ಅಂಗಾoಗ ಶುದ್ದಿ, ನರಮಂಡಲಕ್ಕೆ
ಪ್ರಯೋಜನಕಾರಿ
ಮಲಬದ್ಧತೆ, ಹೊಟ್ಟೆಯುಬ್ಬರ ನಿವಾರಕಿ
ರಕ್ತದೊತ್ತಡ,ಮಧುಮೇಹ ನಿವಾರಕಿ
ಆಧುನಿಕತೆಯ ಅಬ್ಬರದಿ ಮೂಲೆ
ಗುಂಪಾಗಿದ್ದ ನೀನು
ಸಕಲ ವ್ಯಾಧಿಗಳಿಗೆ ಈಡಾದ ಮನುಜರು ಇಂದು ಅರಸಿ ಬರುತ್ತಿರುವರು ನಿನ್ನ ಬಳಿಗೆ ||4||

ಓ ಸಿರಿಧಾನ್ಯ ವೆಂಬ ಭವರೋಗ
ನಿವಾರಕಿಯೇ ಕಾಂಚಾಣ, ಕನಕದಂತೆ ಉಳ್ಳವರ ಸ್ವತ್ತಾಗಿರುವೆ
ಉತ್ತಮ ಆರೋಗ್ಯಕ್ಕಾಗಿ ಬಳಸಿ
ಸಿರಿಧಾನ್ಯ ಬೆಳೆಯುವವರ ಪ್ರೋತ್ಸಾಹಿಸಿ
ಸರ್ವರಿಗೂ ಸಿರಿಧಾನ್ಯ ಲಭಿಸುವ ವಾತಾವರಣ ನಿರ್ಮಿಸಿ
ಸಿರಿಧಾನ್ಯ ಗಳ ಬೆಳಸಿ, ಬಳಸಿ, ಉಳಿಸಿ ||5||

ರಚನೆ : ಎಂ. ಎಸ್. ಆಶಾಲತಾ
ಶಿವೆ ಸುತೆ
ಎಂಟನೇ ಅಡ್ಡರಸ್ತೆ, ಕುವೆಂಪು ನಗರ, ಚನ್ನಪಟ್ಟಣ
ಮೊಬೈಲ್ ಸಂಖ್ಯೆ : 7259559619