MP ಕವನ ಸಂಗ್ರಹ : ನವ ವರುಷದಲ್ಲಿ – ಕವಿಯಿತ್ರಿ ಆಶಾಲತ

Ashalatha
Spread the love

ನವ ವರುಷದಲ್ಲಿ

ಓ ದಯಮಯಿ ಭಗವಂತನೆ ಈ ನವ ವರುಷದಲ್ಲಿ ಮರಣ ಮೃದಂಗವ ಬಾರಿಸದಿರು
ಒಳ್ಳೊಳ್ಳೆಯ ಮರಗಳ ಕಡಿದು
ಮನೆ – ಮನಗಳ ಮಸಣವ ಮಾಡದಿರು
ಬಾಳೆoಬ ಗುಡಿಗೆ ಬೆಳಕಾಗಬೇಕಿರುವ ಜೀವಗಳ ನಂದಿಸದಿರು
ಜೀವನ ಸಂಧ್ಯೆಯಲ್ಲಿರುವ ಮಾಗಿದ ಜೀವಗಳಿಗೆ ಆಸರೆಯಾಗ ಬೇಕಿರುವ ಚೈತನ್ಯದ ಚಿಲುಮೆಗಳ ಬತ್ತಿಸದಿರು ||1||

ಓ ನಿರಾಕಾರ ಸ್ವರೂಪನೆ
ಆಳೆತ್ತರದ ಗುಡ್ಡಗಳ ಕೆಡವಿ ಸಹಸ್ರಾರು ಜೀವಗಳ ಜೀವಂತ ಸಮಾಧಿಯ ಮಾಡದಿರು
ಬಿರುಮಳೆ ಎಂದು ಸಂಭ್ರಮಿಸ ಬೇಕಾದ ಜೀವಗಳ ಘೋರ¢ ನೆನಪುಗಳ ಸುಳಿಯಲ್ಲಿ ಸಿಲುಕಿಸ ದಿರು
ಫಲ ಬಿಡುವ ಮರಗಳ ಕಡಿದು ಮಾಗಿದ ಜೀವಗಳ ಏಕಾಂತಕ್ಕೆ ದೂಡದಿರು ||2||

ಪ್ರವಾಸದಿಂದ ಜೀವನಾನುಭಾವ ಗಳಿಸಬೇಕಾದ ಜೀವಗಳ ಪ್ರಾಣ ಹರಣವ ನೀ ಮಾಡದಿರು
ಮನೆ ಬೆಳಗುವ ವಿದ್ಯುತ್ ನೂರಾರು ಸದನಗಳು ಶಾಶ್ವತ ವಾಗಿ ಅಂಧಕಾರದಲ್ಲಿ ಮುಳುಗದಂತೆ ನೀ ರಕ್ಷಿಸು
ಓ ಅನನ್ಯ ಶಕ್ತಿಯೇ
ಸರ್ವರೂ ನಿಸರ್ಗದತ್ತವಾಗಿ ಬರುವ ಮರಣವ ಸ್ವಾಗತಿಸುವಂತೆ ನೀ ಪ್ರೆರೇಪಿಸು ||3||

ಓ ಸೃಷ್ಟಿ ಕರ್ತನೆ
ಸ್ವಯಂಕೃತ ಸಾವಿನೆಡೆಗೆ
ಸಾಗದಂತೆ ದುರ್ಬಲ ಮನಗಳ ಸದೃಢ ಗೊಳಿಸು
ಕಷ್ಟ ಕಾರ್ಪಣ್ಯ ಗಳು
ಬದುಕಿಗೆ ಪರೀಕ್ಷೆಗಳಂತೆ
ಹಳೆಯ ಕಹಿ ನೆನಪುಗಳ ಮರೆತು
ಹೊಸತನದ ನೀರಿಕ್ಷೆಯಲ್ಲಿ ಬದುಕು ನಡೆಸುವಂತೆ ನೀ ಪ್ರೆರೇಪಿಸು |4||

ತಿಮಿರದ ಹಿಂದೆ ಪ್ರಜ್ವಲಿಸುವ ಬೆಳಕಿರುವುದು
ದ್ವೇಷಸೂಯೆಗಳ ಮರೆತು
ಸ್ವಾರ್ಥ, ಸಂಕುಚಿತತೆಗಳ ತೊರೆದು
ವಿಶಾಲತೆಯ ಪರಿಧಿಯೆಡೆಗೆ ಸಾಗುವಂತೆ ನೀ ಪ್ರೆರೇಪಿಸು
ಈ ನವವರುಷವು ಜವರಾಯನ
ಜಯಿಸುವ ವರುಷವಾಗಲಿ
ಸರ್ವರ ಬಾಳಿನಲ್ಲಿ ಅರೋಗ್ಯ, ಸುಖ ಸಂತೋಷದ ವೃದ್ಧಿಯಾಗಲಿ
ಇಡೀ ಜಗದಲ್ಲಿ ಶಾಂತಿ -ನೆಮ್ಮದಿ ಗಳ ಹೊನಲು ಹರಿಯಲಿ ||5||

ರಚನೆ : ಎಂ ಎಸ್. ಆಶಾಲತಾ
ಶಿವೆಸುತೆ ( ಚನ್ನಪಟ್ಟಣ )
ಶಾಖಾ ವ್ಯವಸ್ಥಾಪಕರು
ಎಂ ಡಿ. ಸಿ. ಸಿ ಬ್ಯಾಂಕ್
ಕೆ. ಹೊನ್ನಲ ಗೆರೆ
ಮದ್ದೂರು