ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಮತ್ತೆ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಮತ್ತೆ ಕೈ ಹಿಡಿದಿದ್ದಾರೆ.
ಕಾಂಗ್ರೆಸ್ ಶನಿವಾರ ಕರ್ನಾಟಕದ ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ (ಶಿಗ್ಗಾಂವ್, ಸಂದೂರು ಮತ್ತು ಚನ್ನಪಟ್ಟಣ) ಭಾರೀ ಜಯಗಳಿಸಿದೆ. ಇದರಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳನ್ನು ಮತ್ತು ಒಬ್ಬ ಜೆಡಿ(ಎಸ್) ಅಭ್ಯರ್ಥಿಯನ್ನು ಸೋಲಿಸಿದೆ. ಸೋತ ಅಭ್ಯರ್ಥಿಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರರು ಸೇರಿದ್ದಾರೆ.
ವಿಜಯಶಾಲಿ ಅಭ್ಯರ್ಥಿಗಳ ವಿವರಗಳು ಶಿಗ್ಗಾಂವಿಯಿಂದ ಕಾಂಗ್ರೆಸ್‌ನ ಪಠಾನ್ ಯಾಸಿರ್ ಅಹ್ಮದ್ ಖಾನ್ ಅವರು ಬಿಜೆಪಿಯ ಭರತ್ ಬೊಮ್ಮಾಯಿ ಅವರನ್ನು 13,448 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚನ್ನಪಟ್ಟಮಣದಿಂದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೀಶ್ವರ ಅವರು ಜೆಡಿ(ಎಸ್) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು 25,413 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಂದೂರಿನಿಂದ
ಕಾಂಗ್ರೆಸ್ ಅಭ್ಯರ್ಥಿ ಇ ಅನ್ನಪೂರ್ಣಾ ಅವರು ಸಂದೂರು ಉಪಚುನಾವಣೆಯಲ್ಲಿ ಬಿಜೆಪಿಯ ಬಂಗಾರ ಹನುಮಂತ ಅವರನ್ನು 9,649 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅನ್ನಪೂರ್ಣಾ ಅವರು ಬಳ್ಳಾರಿಯ ಕಾಂಗ್ರೆಸ್ ಎಂಪಿ ಇ ತುಕಾರಾಮ್ ಅವರ ಪತ್ನಿ. ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜೆಡಿ(ಎಸ್) ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ಉಪಚುನಾವಣೆಗಳು ನಡೆಯಿತು. ಬೊಮ್ಮಾಯಿ ಅವರು 2023 ರ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದರು, ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಅವರು ಭರತ್ ಬೊಮ್ಮಾಯಿಯವರನ್ನು ಸೋಲಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರವನ್ನು ಮೊದಲು ಎಚ್‌ಡಿ ಕುಮಾರಸ್ವಾಮಿ ಪ್ರತಿನಿಧಿಸಿದ್ದರು, ಈಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಸಿ ಪಿ ಯೋಗೇಶ್ವರ್ ರವರು ಸೋಲಿಸಿದ್ದಾರೆ.
ಈ ಚುನಾವಣೆಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯೆ 137 ಕ್ಕೆ ಏರಿದೆ.