ನವದೆಹಲಿ:
ಹಲವು ನಗರಗಳ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದರಿಂದ ನಾಗರಿಕರು ಕಣ್ಣೀರು ಹಾಕಿದ್ದಾರೆ. ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ 40-60 ಕೆಜಿಗೆ ಇದ್ದದ್ದು ಈಗ 70-80 ರೂ.ಗೆ ಏರಿಕೆಯಾಗಿದೆ.
ದೆಹಲಿಯ ಮಾರುಕಟ್ಟೆಯೊಂದರಲ್ಲಿ ಮಾರಾಟಗಾರರೊಬ್ಬರು ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡುತ್ತಾ, “ಈರುಳ್ಳಿ ಬೆಲೆ ಕಿಲೋಗೆ 60 ರಿಂದ 70 ರೂ.ಗೆ ಏರಿದೆ. ನಾವು ಅದನ್ನು ಮಂಡಿಯಿಂದ ಪಡೆಯುತ್ತೇವೆ ಆದ್ದರಿಂದ ನಾವು ಅಲ್ಲಿಂದ ಪಡೆಯುವ ಬೆಲೆಗಳು ನಾವು ಮಾರುವ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಈರುಳ್ಳಿ ಅತ್ಯವಶ್ಯಕವಾದ್ದರಿಂದ ಜನರು ಜಾಸ್ತಿ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಖರೀದಿದಾರರಾದ ಫೈಜಾ ಅವರು ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ತಮ್ಮ ಸಂಕಟವನ್ನು ಹಂಚಿಕೊಂಡು “ಈರುಳ್ಳಿಯ ಬೆಲೆಯು ಈಗಿನ ಸೀಸನ್‌ಗೆ ಅನುಗುಣವಾಗಿ ಕಡಿಮೆಯಾಗಬೇಕಾಗಿದ್ದರೂ ಸಹ ಹೆಚ್ಚಾಗಿದೆ. ನಾನು ಈರುಳ್ಳಿಯನ್ನು ಕಿಲೋಗೆ 70 ರೂ.ಗೆ ಖರೀದಿಸಿದೆ. ಇದು ನಮ್ಮ ಆಹಾರದ ಮೇಲೆಪರಿಣಾಮ ಬೀರಿದೆ. ಮನೆಯಲ್ಲಿನ ಆಹಾರ ಪದ್ಧತಿಯಂತೆ ಪ್ರತಿದಿನ ತಿನ್ನುವ ತರಕಾರಿಗಳ ಬೆಲೆಯನ್ನು ಕಡಿಮೆ ಮಾಡಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.