ನಾರ್ವೆ: ಹಿಮದ ದೇಶದಲ್ಲಿ ಧ್ರುವಪ್ರಭೆಯ ಅಲೌಕಿಕ ಅನುಭವ !!

Norway
Spread the love

ಸೂರ್ಯ ಮುಳುಗದ ನಾಡು ಎಂಬ ಖ್ಯಾತಿಯನ್ನು ಹೊಂದಿರುವ, ಭೂಮಿಯ ಉತ್ತರ ಧ್ರುವದ ಹತ್ತಿರವಿರುವ ಕಡೆಯ ದೇಶ ನಾರ್ವೆ. ಆ ದೇಶದ ವಿಶೇಷತೆಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ಈ ದೇಶ ಅತ್ಯಂತ ಸುಂದರವಾದ ದೇಶವಾಗಿದೆ, ಆದರೆ ಇಲ್ಲಿ ನಿಜವಾದ ಅರ್ಥದಲ್ಲಿ ರಾತ್ರಿ ಇರುವುದಿಲ್ಲ ಎಂಬುದನ್ನು ಹಲವರಿಗೆ ತಿಳಿದಿಲ್ಲ. ಉತ್ತರ ನಾರ್ವೆಯ ಹೇವರ್‌ಫೆಸ್ಟ್ ನಗರದಲ್ಲಿ ಸೂರ್ಯ ಕೇವಲ 40 ನಿಮಿಷಗಳಷ್ಟೇ ಅಸ್ತಮಿಸುತ್ತಾನೆ. ಆದ್ದರಿಂದ, ಇದನ್ನು “ಮಧ್ಯರಾತ್ರಿಯ ಸೂರ್ಯ ಉದಯಿಸುವ ದೇಶ” ಎಂದು ಕರೆಯುತ್ತಾರೆ. ಈ ನಗರದಲ್ಲಿ ಕೇವಲ 40 ನಿಮಿಷಗಳು ಮಾತ್ರ ಕತ್ತಲೆ ಕಂಗೊಳಿಸುತ್ತದೆ, ಉಳಿದ 23 ಗಂಟೆ 20 ನಿಮಿಷಗಳ ಕಾಲ ಇದು ಬೆಳಕಿನಲ್ಲಿ ಇರುತ್ತದೆ.

ನಾರ್ವೆಯ ವಾತಾವರಣ ಬಹಳ ತಂಪಾಗಿದೆ; ಬೇಸಿಗೆಯಲ್ಲೂ ಹಿಮಪಾತವಾಗುತ್ತದೆ. ಬೇಸಿಗೆಯಲ್ಲಿ ಉಷ್ಣತೆ ಶೂನ್ಯ ಡಿಗ್ರಿಯಲ್ಲಿದ್ದು, ಚಳಿಗಾಲದಲ್ಲಿ ಮೈನಸ್ 45 ಡಿಗ್ರಿಗೆ ಇಳಿಯುತ್ತದೆ. ಇದರ ವಿಶಿಷ್ಟ ಸೌಂದರ್ಯ ಒಂದು ವಿಭಿನ್ನ ಲೋಕವನ್ನೇ ಮೂಡಿಸುತ್ತದೆ.

ನಾರ್ವೆ ಉತ್ತರ ಧ್ರುವದ ಹತ್ತಿರವಿರುವುದರಿಂದ ಬೇಸಿಗೆಯಲ್ಲಿ ರಾತ್ರಿ ಇರುವುದಿಲ್ಲ, ಮತ್ತು ಚಳಿಗಾಲದಲ್ಲಿ ಸೂರ್ಯ ಉದಯಿಸುವುದೇ ಇಲ್ಲ. ಆರು ತಿಂಗಳು ಹಗಲು, ಆರು ತಿಂಗಳು ರಾತ್ರಿ ಅನುಭವಿಸಬಹುದಾದ ವಿಶೇಷ ಸ್ಥಳ ಇದು. ಜಗತ್ತಿನಾದ್ಯಂತ ಪ್ರವಾಸಿಗರು ಈ ಸ್ಥಳಕ್ಕೆ ಬರುತ್ತಾರೆ, ಆದರೆ ಒಬ್ಬಂಟಿಯಾಗಿ ಹೋಗುವುದನ್ನು ಇಲ್ಲಿ ನಿಷೇಧಿಸಲಾಗಿದೆ. E-69 ಹೆದ್ದಾರಿ ನಾರ್ವೆಯನ್ನು ಭೂಮಿಯ ತುದಿಗಳೊಂದಿಗೆ ಸಂಪರ್ಕಿಸುವ ವಿಶ್ವದ ಕೊನೆಯ ರಸ್ತೆ.

E69 Highway

ನಾರ್ವೆಯ ಹಿಮಾಚ್ಛಾದಿತ ಪ್ರದೇಶದಲ್ಲಿ ದಾರಿ ತಪ್ಪುವ ಸಂಭವ ಇರುವುದರಿಂದ ಒಬ್ಬಂಟಿ ಪ್ರಯಾಣವನ್ನು ನಿಷೇಧಿಸಲಾಗಿದೆ. ಇಲ್ಲಿನ ಸೂರ್ಯಾಸ್ತ ಮತ್ತು ಧ್ರುವಪ್ರಭೆಯು ಅದ್ಭುತ ದೃಶ್ಯಾವಳಿ ನೀಡುತ್ತವೆ. ಮೊದಲು ಮೀನು ವ್ಯಾಪಾರ ತಾಣವಾಗಿದ್ದ ಈ ದೇಶ, ಈಗ ಪ್ರವಾಸಿಗರಿಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸೌಕರ್ಯಗಳೊಂದಿಗೆ ಸುಂದರ ಪ್ರವಾಸ ತಾಣವಾಗಿದೆ.