ಜೀ ವಾಹಿನಿಯಲ್ಲಿ ಪ್ರತಿ ರಾತ್ರಿ 8 ರಿಂದ 9 ಗಂಟೆಯ ತನಕ ಲಕ್ಷ್ಮೀ ನಿವಾಸ ಧಾರವಾಹಿ ಪ್ರಸಾರವಾಗುತ್ತಲಿದ್ದು ಇತ್ತೀಚೆಗೆ ಖ್ಯಾತಿಯನ್ನು ಪಡೆಯುತ್ತಿದೆ. ಈ ಧಾರವಾಹಿಯಲ್ಲಿ ಜಯಂತ್ ಮತ್ತು ಜಾನವಿ ಎಂಬ ಪಾತ್ರವೂ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಅವರಿಬ್ಬರ ನಟನೆಯು ಬಹಳ ಚೆನ್ನಾಗಿದೆ. ಆದರೆ ಆ ಪಾತ್ರವನ್ನು ನೋಡುವವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬುದನ್ನು ಒಮ್ಮೆ ಯೋಚಿಸಬೇಕು. ಜಯಂತ್ ಪಾತ್ರವು ಒಂದು ಮಾನಸಿಕ ರೋಗಿಯ ಪಾತ್ರ. ಈ ರೀತಿಯ ಸಿನೆಮಾಗಳು ಬಹಳಷ್ಟು ಬಂದಿದೆ. ಆದರೆ ಸಿನಿಮಾ ಬರಿ 3 ಗಂಟೆ, ಅದನ್ನು ನೋಡಿ ಬಂದ ಮೇಲೆ ಹೆಚ್ಚು ಸಮಯ ಮನಸ್ಸಿನಲ್ಲಿ ಉಳಿಯುವುದಿಲ್ಲ. ಆದರೆ ಧಾರವಾಹಿ ಪ್ರತಿ ದಿನ ಪ್ರಸಾರವಾಗುತ್ತದೆ. ಅದರಲ್ಲಿ ಸ್ವಲ್ಪ ಸಮಯವಾದರೂ ಜಯಂತನ ಪಾತ್ರ ಇದ್ದೇ ಇರುತ್ತದೆ. ಇದು ನೋಡುವವರ ಮೇಲೆ ಅಘಾದ ಪರಿಣಾಮ ಬೀರುವ ಸಾಧ್ಯತೆ ಇದೆ. ನಿಜ ಜೀವನದಲ್ಲಿ ನಿಜವಾಗಲೂ ಪ್ರೀತಿಸುವ ಗಂಡ ಅಥವ ಹೆಂಡತಿ ಈ ಪಾತ್ರದಿಂದ ಪ್ರೇರಿತರಾಗಿ ತಮ್ಮ ನಿಜ ಜೀವನದಲ್ಲು ತಮ್ಮ ಬಾಳ ಸಂಗಾತಿಯನ್ನು ಅನುಮಾನ ಪಡಲು ಶುರು ಮಾಡಿದರು ಆಶ್ಚರ್ಯವಲ್ಲ. ಅಥವ ನಿಜವಾಗಿಯು ಮಾನಸಿಕ ಸ್ವಾಸ್ತ್ಯ ಕಳೆದುಕೊಂಡವರು ಹೇಗೆಲ್ಲ ಇರಬೇಕು ಎನ್ನುವುದಕ್ಕೆ ತರಬೇತಿ ನೀಡುತ್ತಿರುವಂತಿದೆ. ಮೊದಲೇ ಸಾಮಾನ್ಯ ಜನರಿಗೆ ಸೆಲಿಬ್ರಿಟಿಗಳನ್ನು ಅನುಸರಿಸುವುದು ಒಂದು ಅಭ್ಯಾಸವಿದೆ. ಈ ರೀತಿ ಪಾತ್ರದ ಅನುಕರಣೆ ಬೇಕಾ ? ಧಾರವಾಹಿಗಳು ಮನರಂಜನೆಗಾಗಿ ಮಾಡುವುದು. ನಿರ್ದೇಶಕರು, ನಿರ್ಮಾಪಕರು ಮನೊರಂಜಿಸುವುದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆ ವಿನಃ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಬಾರದು. ಅದು ಅವರ ಕರ್ತವ್ಯವೂ ಹೌದು, ಎಂಬುದನ್ನು ಮರೆಯಬಾರದು.