ಶ್ರೀಮದ್ಭಗವದ್ಗೀತಾ : 12
4.ಅತ್ರ ಶೂರಾ ಮಹೇಷ್ಟಾಸಾಃ ಭೀಮಾರ್ಜುನಸಮಾ ಯುಧಿ।
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ।।
5.ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ |
ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ||
6.ಯುಧಾಮನ್ಯುಶ್ಚ ವಿಕ್ರಾಂತಃ ಉತ್ತಮೌಜಾಶ್ಚ ವೀರ್ಯವಾನ್ ।
ಸೌಭದ್ರೋ ದ್ರಪದೇಯಾಶ್ಚ ಸರ್ವ ಏವ ಮಹಾರಥಾಃ॥
ಅತ್ರ = ಈ ಸೈನ್ಯದಲ್ಲಿ (ಇರುವವರೆಲ್ಲ), ಶೂರಾಃ = ವೀರರು, ಮಹೇಷ್ವಾಸಾಃ =
ಮಹತ್ತರವಾದ ಧನುಸ್ಸುಗಳನ್ನು ಧರಿಸಿದವರು, ಯುಧಿ = ಯುದ್ಧದಲ್ಲಿ ಭೀಮಾರ್ಜುನಸಮಾಃ = ಭೀಮಾರ್ಜುನರ ಸಮಾನರು (ಅವರು ಯಾರೆಂದರೆ) ಯುಯುಧಾನಃ = ಯುಯುಧಾನನು, ಚ ವಿರಾಟಃ = ಮತ್ತು ವಿರಾಟನು, ಚ ಮತ್ತು, ಮಹಾರಥಃ ಮಹಾರಥನಾದ, ದ್ರುಪದಃ ದ್ರುಪದನು, ಧೃಷ್ಟಕೇತು: = ಧೃಷ್ಟಕೇತುವು, ಚೇಕಿತಾನಃ = ಚಿಕಿತಾನನ ಪುತ್ರನು, ಚ-ವೀರ್ಯವಾನ್ ಮತ್ತು ಪರಾಕ್ರಮವಂತನೂ, ಕಾಶೀರಾಜಃ = ಕಾಶೀದೇಶದ ರಾಜನೂ ಆದ, ಪುರುಜಿತ್ = ಪುರುಜಿತ್ ಎಂಬುವವನು, ಕುಂತಿಭೋಜ।-ಚ = ಮತ್ತು ಕುಂತಿಭೋಜನು, ನರಪುಂಗವಃ = ಮಾನವರಲ್ಲಿ ಶ್ರೇಷ್ಠನಾದ, ಶೈಬ್ಯಃ = ಶೈಬ್ಯನು, ಚ = ಮತ್ತು, ವಿಕ್ರಾಂತಃ = ಪರಾಕ್ರಮಶಾಲಿಯಾದ. ಯುಧಾಮನ್ಯುಃ – ಚ = ಯುಧಾಮನ್ಯುವು, ವೀರ್ಯವಾನ್ = ಪರಾಕ್ರಮವಂತನಾದ, ಉತ್ತಮೌಜಾಃ = ಉತ್ತಮೌಜಸನು, ಸೌಭದ್ರಃ = ಸುಭದ್ರಾ ಪುತ್ರನಾದ ಅಭಿಮನ್ಯುವು, ದ್ರೌಪದೇಯಾಃ-ಚ = ಮತ್ತು, ದ್ರೌಪದೀಪುತ್ರರು ಐವರು, ಸರ್ವೇ = ಇವರೆಲ್ಲರೂ, ಮಹಾರಥಾ-ಏವ ಮಹಾರಥರೇ ಆಗಿದ್ದಾರೆ.
ಆಚಾರ್ಯರೆ! ಎದುರಿಗಿರುವ ಈ ಮಹಾಸೈನ್ಯವನ್ನು ನೋಡಿ. ಅಲ್ಲಿ ಎಲ್ಲರೂ ಮಹಾವೀರರೇ ಕಾಣಿಸುತ್ತಿದ್ದಾರೆ. ಒಬ್ಬೊಬ್ಬನೂ ಭೀಮಾರ್ಜುನರ ಸಮಾನರಾಗಿದ್ದಾರೆ. ಇವರಲ್ಲಿ ಯುಯುಧಾನನು, ವಿರಾಟನು, ದ್ರುಪದನು, ಧೃಷ್ಟಕೇತುವು, ಚೇಕಿತಾನನು, ಕಾಶೀರಾಜನು, ಪುರುಜಿತ್, ಕುಂತಿಭೋಜನು, ಶೈಬ್ಯನು, ಯುಧಾಮನ್ಯುವು, ಉತ್ತಮೌಜಸನು, ಅಭಿಮನ್ಯುವು, ದ್ರೌಪದೀಪುತ್ರರು ಇದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಮಹಾರಥರೇ ಆಗಿದ್ದಾರೆ.
7.ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ!!
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ।।
ದ್ವಿಜೋತ್ತಮ = ಎಲೈ ದ್ವಿಜಶ್ರೇಷ್ಠನೆ!, ಆಸ್ಮಾಕಂ-ತು = ನಮ್ಮವರಲ್ಲಾದರೆ, ಯೇ = ಯಾರು, ವಿಶಿಷ್ಟಾಃ = ಶ್ರೇಷ್ಠರೋ, ಮಮ ಸೈನ್ಯಸ್ಯ= ನನ್ನ ಸೈನ್ಯದ, ನಾಯಕಾಃ = ನಾಯಕರೋ, ತಾನ್ = ಅವರನ್ನು ಕುರಿತು, ನಿಬೋಧ = ತಿಳಿದುಕೋ. ತೇ= ನಿನಗೆ, ಸಂಜ್ಞಾರ್ಥಂ = ಜ್ಞಾಪಿಸಲು, ತಾನ್ = ಅವರನ್ನು ಕುರಿತು, ಬ್ರವೀಮಿ = ಹೇಳುತ್ತಿದ್ದೇನೆ.
ಎಲೈ ದ್ವಿಜೋತ್ತಮನೆ! ಇನ್ನು ನನ್ನ ಸೈನ್ಯದಲ್ಲಿ ಪ್ರಮುಖ ನಾಯಕರು ಯಾರೋ ಅವರನ್ನು ನಿನಗೆ ನೆನೆಪಿಸಿಕೊಡುತ್ತೇನೆ, ಕೇಳು.
8.ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ।।
ಭವಾನ್ ನೀವು, ಭೀಷ್ಮಃ-ಚ = ಮತ್ತು ಭೀಷ್ಮನು, ಕರ್ಣಃ-ಚ = ಮತ್ತು ಕರ್ಣನು, ಕೃಪಃ-ಚ = ಹಾಗೂ ಕೃಪನು, ಸಮಿತಿಂಜಯಃ = ಯುದ್ಧಗಳಲ್ಲಿ ಗೆಲ್ಲುವ ಸ್ವಭಾವವುಳ್ಳ, ಅಶ್ವತ್ಥಾಮಾ = ಅಶ್ವತ್ಥಾಮನು, ವಿಕರ್ಣಃ ! ಚ = ಮತ್ತು ವಿಕರ್ಣನು, ಸೌಮದತ್ತಿಃ! ಸೋಮದತ್ತನ ಪುತ್ರನಾದ, ಜಯದ್ರಥಃ = ಜಯದ್ರಥನು …
ಪೂಜ್ಯನಾದ ನೀನು , ಭೀಷ್ಮನು, ಕರ್ಣನು, ಕೃಪನು, ಅಶ್ವತ್ಥಾಮನು, ವಿಕರ್ಣನು ( ಭೂರಿಶ್ರವಸ್ಸು ), ಜಯದ್ರಥನು……
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ