ಬೆಂಗಳೂರು — ಅಲಹಾಬಾದ್ ನಲ್ಲಿ ನಡೆಯುತ್ತಿರುವ ಪ್ರಯಾಗ್ ರಾಜ್ ಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಾಗವಹಿಸಲು ಭಕ್ತರು ತೆರಳುವುದು ಹೆಚ್ಚಾಗುತ್ತಿದ್ದು ಮುಂಜಾಗ್ರತ ಕ್ರಮವಾಗಿ ಕೇಂದ್ರ ಸರ್ಕಾರ ತೆರಳುವ ಭಕ್ತರನ್ನು ನಿಯಂತ್ರಿಸಲು ಕ್ರಮಕ್ಕೆ ಮುಂದಾಗಿದೆ.
ಅಲಹಾಬಾದ್ ಪ್ರಯಾಗ್ರಾಜ್ ಗೆ ತೆರಳಲು ರೈಲ್ವೆ ಇಲಾಖೆ ವತಿಯಿಂದ ತೆರಳುವ ಹೆಚ್ಚುವರಿ ಭೋಗಿಗಳನ್ನು ಸೇರಿಸಿಕೊಂಡು ತೆರಳಲು ಅವಕಾಶ ಮಾಡಿಕೊಟ್ಟಿದ್ದು ಈ ಹಿನ್ನೆಲೆಯಲ್ಲಿ ದಿಡೀರೆಂದು ಹೆಚ್ಚುವರಿ ಭೋಗಿಗಳನ್ನು ರದ್ದು ಮಾಡಿ ಪ್ರಕಟಣೆ ಹೊರಡಿಸಿರುವ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಭಕ್ತರು ವಾಪಸ್ ಅವರವರ ಸ್ಥಳಕ್ಕೆ ಹೇರಳಲು ಸೂಚಿಸಲಾಗಿದೆ.
ಮೈಸೂರಿನಿಂದ ಇಂದು ಒಂದು ಭೋಗಿ ಹೊರಟಿದ್ದು ಬೆಂಗಳೂರಿನ ತನಕ ಹೊರಟಿದ್ದು ನಂತರ ಇಲಾಖೆಯಿಂದ ಬಂದ ಸೂಚನೆ ಮೇರೆಗೆ ಮತ್ತೆ ವಾಪಸ್ಸು ತೆರಳುವಂತಾಗಿದೆ ಎಂದು ಪ್ರಯಾಗ್ ರಾಜಿಗೆ ಹೊರಟಿದ್ದ ಯಾತ್ರಿಯೊಬ್ಬರು ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.
ಕುಂಭಮೇಳಕ್ಕೆ ತೆರಳುತ್ತಿದ್ದ ಭಕ್ತರಿಗೆ ದಿಢೀರ್ ಶಾಕ್ ಮನೆಗೆ ವಾಪಸ್ ಆದ ಪ್ರಯಾಣಿಕರು
