ಗೀತೆ – 20 : ಕೆಟ್ಟದು ಎಂದು ತಿಳಿದ ಮೇಲೆ ಏಕೆ ದಾರಿಯನ್ನು ಬದಲಿಸಬಾರದು ?

Gita
Spread the love

ಶ್ರೀ ಮದ್ಭಗವದ್ಗೀತಾ : 20

38 . ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತ ಚೇತಸಃ।
ಕುಲಕ್ಷಯ ಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ।।

39.ಕಥಂ ನ ಜ್ಞೇಯಮಸ್ಥಾಭಿಃ ಪಾಪಸ್ಮಾನ್ನಿವರ್ತಿತುಮ್ |
ಕುಲಕ್ಷಯ ಕೃತಂ ದೋಷಂ ಪ್ರಪಶ್ಯದ್ಧಿರ್ಜನಾರ್ದನ!

ಜನಾರ್ದನ = ಓ ಶ್ರೀಕೃಷ್ಣನೆ!, ಏತೇ = ದುರ್ಯೋಧನಾದಿ ಲೋಭೋಪಹತಚೇತಸಃ = ಅತ್ಯಾಸೆಯಿಂದ ಕೆಟ್ಟ = ದುರ್ಯೋಧನಾದಿಗಳು, ಮನಸ್ಸುಳ್ಳವರಾಗಿ, ಕುಲಕ್ಷಯಕೃತಂ = ವಂಶವನ್ನು ನಾಶ ಮಾಡುವುದರಿಂದ ಉಂಟಾಗುವ, ದೋಷಂ 3 = ದೋಷವನ್ನು ಮತ್ತು, ಮಿತ್ರದ್ರೋಹೇ = ಮಿತ್ರರಿಗೆ ದ್ರೋಹವೆಸಗುವಲಿ ಇರುವ, ಪಾತಕಂ = ಪಾಪವನ್ನೂ, ಯದಿ-ಅಪಿ-ನ-ಪಶ್ಯಂತಿ = ಕಾಣದಿರುವರಾದರೂ, ಕುಲಕ್ಷಯಕೃತಂ ಕುಲದ ನಾಶದಿಂದಾಗುವ, ದೋಷಂ = ಕೇಡನ್ನು, ಪ್ರಪಶ್ಯದ್ಧಿ: = ಬಲ್ಲವರಾದ, ಅಸ್ವಾಭಿ = ೯೯೯೦
ನಮ್ಮಿಂದ, ಅಸ್ಮಾತ್-ಪಾಪಾತ್ = ಈ ಪಾಪದಿಂದ, ನಿವರ್ತಿತುಂ = ಕಥಂ = ಏತಕ್ಕೆ, ನ-ಜ್ಞೆಯಂ= ತಿಳಿಯಲ್ಪಡಬಾರದು ? ಹಿಮ್ಮೆಟ್ಟಲು,

ಓ ಜನಾರ್ದನನೆ! (ಮಾಡಿದ ಪಾಪಗಳಿಗೆ ತಕ್ಕಂತೆ ಜೀವಿಗಳನ್ನು ಶಿಕ್ಷಿಸುವ ಶ್ರೀಕೃಷ್ಣನೆ!) ಈ ದುರ್ಯೋಧನಾದಿಗಳು ಹಿಡಿಯದಾಸೆಯವರು. ಆ ಕಾರಣ ಇವರ ಬುದ್ದಿ ಕೆಟ್ಟುಹೋಗಿದೆ. ಆದ್ದರಿಂದಲೇ, ವಂಶನಾಶ ಮಾಡುವುದು ದೋಷವೆಂದಾಗಲೀ, ಮಿತ್ರರನ್ನು ನಂಬಿಸಿ ಮೋಸ ಮಾಡುವುದು ಪಾಪವೆಂದಾಗಲೀ, ಅವರಿಗೆ ತಿಳಿಯದೇ ಹೋಗಿದೆ. ಅದಷ್ಟು ಮಾತ್ರಕ್ಕೆ ಆ ತಪ್ಪುಗಳನ್ನೇ ನಾವೂ ಮಾಡಬೇಕೇ ? ಅವು ತಪ್ಪುಗಳು, ಪಾಪಗಳು ಎಂದು ನಮಗೆ ತಿಳಿಯುತ್ತಿರುವಾಗ ಆ ಕೆಟ್ಟಹಾದಿಯಿಂದ ನಾವೇಕೆ ಹಿಮ್ಮೆಟ್ಟಬಾರದು ?

ಅವತಾರಿಕೆ :

ಇಲ್ಲಿಯವರೆಗೂ ಬಂಧುಪ್ರೀತಿಯನ್ನು ಮಾತ್ರ ವ್ಯಕ್ತಪಡಿಸಿದ ಅರ್ಜುನನು, ಇನ್ನು ಈ ಮಹಾಯುದ್ದದಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು, ಅವುಗಳಿಂದ ಈ ಯುದ್ಧದಲ್ಲಿ ಪಾಲ್ಗೊಳ್ಳುವ ಸೈನಿಕರಿಗೂ, ಅವರ ಕುಟುಂಬಗಳ ತಲೆಮಾರುಗಳಿಗೂ ಉಂಟಾಗುವ ಕೆಡುಕನ್ನು ನೆನೆದು, ತನ್ನ ಆವೇದನೆಯನ್ನು ವ್ಯಕ್ತಪಡಿಸುತ್ತಿದ್ದಾನೆ.

40.ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾ ಸ್ಸನಾತನಾಃ ।
ಧರ್ಮೇ ನಷ್ಟೇ ಕುಲಂ ಕೃತ್ಸ್ನಂ ಅಧರ್ಮೋಭಿಭವತ್ಯುತ॥

.ಕುಲಕ್ಷಯೇ = ವಂಶವು ಕೆಟ್ಟುಹೋದರೆ, ಸನಾತನಾಃ = ಅನಾದಿಕಾಲದಿಂದ ಬರುತ್ತಿರುವ, ಕುಲಧರ್ಮಾಃ = ಕುಲಧರ್ಮಗಳು, ಪ್ರಣಶ್ಯಂತಿ = ನಾಶವಾಗುವುವು. ಧರ್ಮೇ = ಧರ್ಮವು, ನಷ್ಟೇ = ಇಲ್ಲವಾದರೆ, ಕೃತ್ನಂ-ಕುಲಂ = ಕುಲವೆಲ್ಲವನ್ನೂ, ಅಧರ್ಮಃ = ಅಧರ್ಮವು, ಉತ = ತಪ್ಪದೇ, ಅಭಿಭವತಿ = ಆಕ್ರಮಿಸುವುದು.

ಪ್ರತಿಯೊಂದು ವಂಶಕ್ಕೂ ಅನಾದಿಕಾಲದಿಂದ ಬಂದಿರುವ ಆಚಾರಗಳು ಇರುತ್ತವೆ. ಅವುಗಳು ಆ ವಂಶದ ವೃದ್ಧರ ಮೇಲೆ ಆಧಾರಪಟ್ಟು ನಡೆಯುತ್ತಿರುತ್ತವೆ. ಕುಲದಲ್ಲಿನ ಪ್ರಧಾನಪುರುಷರೆಲ್ಲರೂ ಯುದ್ಧದಲ್ಲಿ ಸತ್ತುಹೋದರೆ, ಆ ವಂಶವು ಪ್ರಾಯಶಃ ನಾಶವಾದಂತೆಯೇ. ಹಾಗೆ ವಂಶನಾಶವಾದರೆ, ವಂಶ ಧರ್ಮಗಳು ನಶಿಸಿಹೋಗುತ್ತವೆ. ಧರ್ಮವು ನಾಶವಾದರೆ, ಆ ವಂಶದ ಪ್ರಜೆಗಳನ್ನು ಅಧರ್ಮವು ಮುಸುಕಿಕೊಳ್ಳುವುದು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ