MP ಕವನ ಸಂಗ್ರಹ : ಸುಗ್ಗಿ ಸಂಕ್ರಾಂತಿ – ಕವಿಯಿತ್ರಿ ಆಶಾಲತ

Ashalatha
Spread the love

ಸುಗ್ಗಿ – ಸಂಕ್ರಾಂತಿ

ಬಂದಿದೆ, ಬಂದಿದೆ ಸಂಕ್ರಾಂತಿ
ತಂದಿದೆ, ತಂದಿದೆ ನವ ಕ್ರಾಂತಿ
ನವ ವರ್ಷದಿ, ನವೋಲ್ಲಾಸದಿ
ಸರ್ವರೂ ಸಡಗರ ಸಂಭ್ರಮದಿ ಆಚರಿಸುವ ಹಬ್ಬ ಸಂಕ್ರಾಂತಿ
ರೈತರಿಗೆ ಸುಗ್ಗಿಯ ಹಬ್ಬ, ಮಂದಿಗೆ ಹಿಗ್ಗಿನ ಹಬ್ಬ
ಜಗತ್ ಚಕ್ಷುವಾದ ಭಾಸ್ಕರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಹಬ್ಬ
ಸಂಕ್ರಾಂತಿ ||1||

ಎಳ್ಳು ಬೆಲ್ಲವ ಹಂಚಿ, ಸವಿ ನುಡಿಗಳನ್ನಾಡಿ ಪರಸ್ಪರು
ದ್ವೇಷಸೂಯೆಗಳನ್ನು ಮರೆತು
ಸಾ ಮರಸ್ಯದಿಂದ ಇರಬೇಕೆಂಬ
ಸಂದೇಶ ಸಾರುವ ಹಬ್ಬ ಸಂಕ್ರಾಂತಿ
ಬಡವಬಲ್ಲಿದನೆಂಬ ತಾರಾತಮ್ಯ ವಿಲ್ಲದೆ
ಜಾತಿಮತಗಳೆoಬ ಬೇಧವಿಲ್ಲದೆ
ಸಕಲರು ಆಚರಿಸುವ ಹಬ್ಬ
ಸಂಕ್ರಾಂತಿ
ಬಂದಿದೆ ಬಂದಿದೆ ಸಂಕ್ರಾಂತಿ ತಂದಿದೆ ತಂದಿದೆ ನವಕ್ರಾಂತಿ ||2||

ಅನ್ನದಾತನಿಗೆ ಹೆಗಲು ನೀಡಿ ಕಾಯಕ ಗೈವ ಕಾಮಧೇನುಗಳ
ಪೂಜಿಸುವ ಹಬ್ಬ ಸಂಕ್ರಾಂತಿ
ಅವನೀಪುತ್ರನು ಬೆಳೆದ ಫಸಲನ್ನು
ಭಕ್ತಿ – ಭಾವದಿಂದ ಪೂಜಿಸುವ ಹಬ್ಬ ಸಂಕ್ರಾಂತಿ
ಎತ್ತುಗಳನ್ನು ಸಿಂಗರಿಸಿ, ಕಿಚ್ಚು ಹಾಯಿಸಿ ಉತ್ಸಾಹದಿಂದ ಆಚರಿಸುವ ಹಬ್ಬ ಸಂಕ್ರಾಂತಿ

ಯಜ್ಞ ಯಾಗಾದಿಗಳಿಗೆ, ಶುಭ ಕಾರ್ಯಗಳಿಗೆ ಸರ್ವ ಶ್ರೇಷ್ಠ ದಿನ ಸಂಕ್ರಾಂತಿ
ವಿಶ್ವದ ಆತ್ಮ ಜಗದ ಕಣ್ಣು ಸೂರ್ಯ ದೇವನ ಕೃಪೆಗಾಗಿ ಶ್ರದ್ದಾ ಭಕ್ತಿಗಳಿಂದ ಆಚರಿಸುವ ಹಬ್ಬ ಸಂಕ್ರಾಂತಿ
ಬಂದಿದೆ ಬಂದಿದೆ ಸಂಕ್ರಾಂತಿ
ತಂದಿದೆ ತಂದಿದೆ ನವಕ್ರಾಂತಿ ||3||

ಮಳೆ ಬೀಳಲು, ಇಳೆ ಬೆಳಗಲು
ಕಾರಣಿ ಭೂತನಾದ
ದಿನಕರನ ದಿವ್ಯ ತೇಜಸ್ಸಿನ ಮಹಿಮೆ ಸಾರುವ ಹಬ್ಬ ಸಂಕ್ರಾಂತಿ
ಹಳೆಯ ಕಹಿ ನೆನಪುಗಳನ್ನು ಮರೆತು
ನವ ಆಲೋಚನೆಗಳ,ಸವಿ ಭಾವಗಳೊಂದಿಗೆ ಮಾನವೀಯ
ಮೌಲ್ಯಗಳನ್ನು ಉಳಿಸಿ, ಬೆಳಸಿ ಎಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ
ಬಂದಿದೆ, ಬಂದಿದೆ ಸಂಕ್ರಾಂತಿ ತಂದಿದೆ, ತಂದಿದೆ ನವಕ್ರಾಂತಿ ||4||

ರಚನೆ : ಎಂ ಎಸ್ ಆಶಾಲತಾ
ಶಿವೆಸುತೆ ( ಚನ್ನಪಟ್ಟಣ )
ಶಾಖಾ ವ್ಯವಸ್ಥಾಪಕರು
ಎಂ. ಡಿ. ಸಿ. ಸಿ. ಬ್ಯಾಂಕ್
ಕೆ. ಹೊನ್ನಲಗೆರೆ