MP ಕವನ ಸಂಗ್ರಹ : ” ನುಡಿ ಜಾತ್ರೆ ” – ಕವಿಯಿತ್ರಿ ಆಶಾಲತ

Ashalatha
Spread the love

ನುಡಿ ಜಾತ್ರೆ
ಹೋಗೋಣ ಎಲ್ಲರೂ ಹೋಗೋಣ ಕನ್ನಡಮ್ಮನ ನುಡಿ ಜಾತ್ರೆಗೆ
ನನ್ನ ಅಕ್ಕರೆಯ ನಾಡು, ಸಕ್ಕರೆಯ ಬೀಡಿನಲ್ಲಿ ನಡೆಯುವ ಅಕ್ಷರ ಜಾತ್ರೆಗೆ
ಚನ್ನಬಸಪ್ಪ ನವರ ಸಾರಥ್ಯದಲ್ಲಿ ನಡೆಯುವ ಕನ್ನಡದ ನುಡಿ ಹಬ್ಬ ಕ್ಕೆ
ಬನ್ನಿರಣ್ಣ, ಬನ್ನಿರಕ್ಕ ಎಲ್ಲರು ಸಡಗರ, ಸಂಭ್ರಮದಿಂದ ಸಾಹಿತ್ಯ ಜಾತ್ರೆಯಲ್ಲಿ ಸೇರೋಣ
ಕನ್ನಡಮ್ಮನ ನುಡಿ ತೇರನ್ನು ಒಮ್ಮನದಿಂದ ಎಳೆಯೋಣ ||1||

ಮೂರು ದಶಕಗಳ ನಂತರ ನಡೆಯುತ್ತಿದೆ ಅಕ್ಷರ ಜಾತ್ರೆಯು
ಗಂಡುಮೆಟ್ಟಿದ ನಾಡಿನಲ್ಲಿ
ಜುಳು , ಜುಳು ಹರಿಯುವ ಜೀವನದಿ ಕಾವೇರಿ ತಾಯಿಯ
ಮಡಿಲಿನಲ್ಲಿ
ಸೃಷ್ಟಿಯ ಸಮಸ್ತ ಜೀವ ರಾಶಿಗೂ
ತುತ್ತು ನೀಡುವ ಅನ್ನದಾತನ ನೆಲದಲ್ಲಿ
ಬನ್ನಿರಣ್ಣ, ಬನ್ನಿರಕ್ಕ ಎಲ್ಲರೂ ಸಡಗರ, ಸಂಭ್ರಮದಿಂದ ಸಾಹಿತ್ಯ ಜಾತ್ರೆಯಲ್ಲಿ ಸೇರೋಣ
ಕನ್ನಡಮ್ಮನ ನುಡಿ ತೇರನ್ನು ಒಮ್ಮನದಿಂದ ಎಳೆಯೋಣ ||2||

ಪ್ರಸಿದ್ದ ಕಲಾವಿದರು, ಚಲನಚಿತ್ರ ನಟರು, ನಿಸ್ವಾರ್ಥ ರಾಜಕಾರಣಿ ಗಳು ಮಹಾನ್ ಕವಿವರ್ಯರು ಉದಯಿಸಿದ ನಾಡಿನಲ್ಲಿ ಕಬ್ಬಿಣ ಹಾಲಿನ ರುಚಿಯ, ಬೆಲ್ಲದ ಘಮದ ಸವಿಯ ಆಸ್ವಾದಿಸೋಣ
ಜಾತಿ -ಭೇದವ ತೊರೆದು, ದ್ವೇಷಾಸೂಯೆಗಳ ಮರೆತು ಸರ್ವ ಧರ್ಮಿಯರು ಒಗ್ಗೂಡೋಣ ಕನ್ನಡಮ್ಮನ ಹಬ್ಬದಲ್ಲಿ
ಕರುನಾಡ ಐಸಿರಿಯ ವಿಶ್ವ ವಿಖ್ಯಾತ ಗೊಳಿಸೋಣ
ಬನ್ನಿರಣ್ಣ, ಬನ್ನಿರಕ್ಕ ಎಲ್ಲರೂ ಸಡಗರ, ಸಂಭ್ರಮದಿಂದ ಸಾಹಿತ್ಯ
ಜಾತ್ರೆಯಲ್ಲಿ ಸೇರೋಣ
ಕನ್ನಡಮ್ಮನ ನುಡಿ ತೇರನ್ನು ಒಮ್ಮನದಿಂದ ಎಳೆಯೋಣ ||3||

ಪುಸ್ತಕ ಮಳಿಗೆಗಳ
ಅವಲೋಕಿಸಿ ಉತ್ತಮ ಕೃತಿಗಳ ಕೊಳ್ಳೋಣ ನವ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹವ ನೀಡೋಣ
ಕಾಂಚಾಣವ ವ್ಯರ್ಥವಾಗಿ ವ್ಯಯಿಸದೆ ಸದುಪಯೋಗ ಪಡಿಸಿ ಕೊಳ್ಳೋಣ
ಕನ್ನಡ ಭಾಷಾ ಸಿರಿವಂತಿಕೆಯ ಜಗದ್ವಿಖ್ಯಾತಗೊಳಿಸೋಣ
ತನ್ಮೂಲಕ ತಾಯ್ನಾಡಿನ ಋಣವ
ಕೊಂಚವಾದರೂ ತೀರಿಸೋಣ
ಬನ್ನಿರಣ್ಣ, ಬನ್ನಿರಕ್ಕ ಎಲ್ಲರೂ ಸಡಗರ, ಸಂಭ್ರಮದಿಂದ ಸಾಹಿತ್ಯ ಜಾತ್ರೆಯಲ್ಲಿ ಪಾಲ್ಗೊಳ್ಳೋಣ
ಕನ್ನಡಮ್ಮನ ನುಡಿ ತೇರನು ಒಮ್ಮನದಿಂದ ಎಳೆಯೋಣ ||4||