ಕರುನಾಡು
ಎಂಥ ಚೆಂದದ ನಾಡು ನಮ್ಮ ಕರುನಾಡು
ಎಂಥ ಸುಂದರ ಬೀಡು ನಮ್ಮ ತಾಯ್ನಾಡು
ಸಾಹಿತ್ಯ, ಸಂಸ್ಕೃತಿಯಲ್ಲಿ, ಆಚಾರ – ವಿಚಾರಗಳಲ್ಲಿ
ಶ್ರೀಮಂತವಾಗಿದೆ ನಮ್ಮ ಕರುನಾಡು
ಕೆಚ್ಚೆದೆಯ ಕಲಿಗಳಿಂದ, ವೀರಯೋಧರಿಂದ ‘ಗಂಡು ಮೆಟ್ಟಿದ ನಾಡೆಂದು ‘ ಪ್ರಸಿದ್ಧಿ ಪಡೆದಿದೆ ನಮ್ಮ ನಾಡು
ಎಂಥ ಚೆಂದದ ನಾಡು ನಮ್ಮ ಕರುನಾಡು ||1||
ಗಿರಿ -ಶೃಂಗಗಳೇ ನನ್ನ ನಾಡಿನ ನಯನಗಳು
ನದಿ-ಝರಿಗಳೇ ನನ್ನ ನಾಡಿನ ಕರ್ಣಗಳು
ಹಸಿರಿನ ವನಸಿರಿಯೇ ನನ್ನ
ನಾಡಿನ ಸೊಬಗಿನ ಐಸಿರಿಯು
ರಾಜ ವಂಶಸ್ಥರಿಂದ, ಸ್ವಾತಂತ್ರ್ಯ ಹೋರಾಟಗಾರರಿಂದ, ಕವಿವರ್ಯ
ರಿಂದ ಪ್ರಖ್ಯಾತಿ ಹೊಂದಿದೆ ನಮ್ಮ ಕರುನಾಡು
ಕಲೆ, ಕಲಾವಿದರಿಂದ ಸುಮಧುರವಾದ ತಾಯ್ ನುಡಿಯಿಂದ ವಿಶಿಷ್ಟವಾಗಿ ವಿಜೃಂಭಿಸಿದೆ ನಮ್ಮ ಕರುನಾಡು ||2||
ರತ್ನತ್ರಯರಿಂದ ರತ್ನ ದಂತೆ ಪ್ರಜ್ವಲಿಸಿದೆ ನಮ್ಮ ನಾಡು
ವಚನಕಾರರ ವಚನಗಳಿಂದ ಸಾಹಿತ್ಯ ಸುಧೆಯ ಹರಿಸಿದೆ ನಮ್ಮ ನಾಡು
ದಾಸವರೇಣ್ಯರ ಕೀರ್ತನೆಗಳಿಂದ
ದಶ ದಿಕ್ಕುಗಳಲ್ಲಿ ಪಲೈಸಿದೆ ಕರುನಾಡ ಕೀರ್ತಿವಲ್ಲರಿ
ಮಲ್ಲಿಗೆಯ ಘಮಲಿನಂತೆ,
ಶ್ರೀಗಂಧದ ಪರಿಮಳದಂತೆ ಎಲ್ಲೆಡೆ ಪಸರಿಸಿದೆ ಕಸ್ತೂರಿ ಕನ್ನಡದ ಕಂಪು ಎಂಥ ಚೆಂದದ ನಾಡು ನಮ್ಮ ಕರುನಾಡು ||3||
ಚೆಂದದ ನಾಡು ನಮ್ಮ ಜೀವನಾಡಿ ಯಾಗಬೇಕು
ಸುಂದರ ತಾಯ್ ನುಡಿ ನಮ್ಮ ಜೀವದುಸಿರಾಗಬೇಕು ಪ್ರತಿ ದಿನ, ಪ್ರತಿ ಹಂತದಲ್ಲೂ ನಮ್ಮಭಾಷೆಯ
ಬಳಕೆಯಾಗಬೇಕು
ನಮ್ಮ ನಾಡಿನಲ್ಲಿ ತಾಯ್ ನುಡಿ ಅನ್ನದ ಭಾಷೆಯಾಗಲು
ಅರಿವಿನ ಭಾಷೆಯಾಗಲು
ಸರ್ವರೂ ಟೊoಕ ಕಟ್ಟಿ ನಿಲ್ಲೋಣ
ಕಾಯ, ವಾಚ,ಮನಸ ಅವಿರತ ಹೋರಾಟ ಮಾಡೋಣ ತಾಯಿ ಭುವನೇಶ್ವರಿಯ ಸೇವಾ ಕೈoಕರ್ಯವ ಎಲ್ಲರೂ ಒಮ್ಮನದಿಂದ ಮಾಡೋಣ ||4¡||
ರಚನೆ : ಎಂ. ಎಸ್. ಆಶಾಲತಾ
(ಚನ್ನಪಟ್ಟಣ) ಶಿವೆಸುತೆ
ಶಾಖಾ ವ್ಯವಸ್ಥಾಪಕರು ಎಂ. ಡಿ. ಸಿ. ಸಿ. ಬ್ಯಾಂಕ್, ಕೆ. ಹೊನ್ನಲಗೆರೆ
ಮದ್ದೂರು