ಕರ್ನಾಟಕ ಲೋಕಾಯುಕ್ತ : ದೂರು ಸ್ವೀಕರಿಸುವ ಕಾರ್ಯಕ್ರಮ ಡಿ.13 ಕ್ಕೆ ಮುಂದೂಡಿಕೆ

Spread the love

 

ಕರ್ನಾಟಕ ಲೋಕಾಯುಕ್ತ : ದೂರು ಸ್ವೀಕರಿಸುವ ಕಾರ್ಯಕ್ರಮ ಡಿ.13 ಕ್ಕೆ ಮುಂದೂಡಿಕೆ*

ಮೈಸೂರು, ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಅಧಿಕಾರಿಗಳಿಂದ ಡಿಸೆಂಬರ್ 11 ರಂದು ಬೆಳಿಗ್ಗೆ 11 ಗಂಟೆಯಿoದ ಮದ್ಯಾಹ್ನ 1 ಗಂಟೆಯವರೆಗೆ ನಂಜನಗೂಡು ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೂರು ಸ್ವೀಕರಿಸುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾಗಿದ್ದಂತಹ ಎಸ್.ಎಂ ಕೃಷ್ಣರವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಿರುವುರಿಂದ ಸದರಿ ಕಾರ್ಯಕ್ರಮವನ್ನು ಡಿಸೆಂಬರ್ 13 ಕ್ಕೆ ಮುಂದೂಡಲಾಗಿದೆ.

 

ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಅಧಿಕೃತ ಕೆಲಸಗಳ ಅನಗತ್ಯ ವಿಳಂಬ, ಲಂಚದ ಹಣದ ಬೇಡಿಕೆ ಹಾಗೂ ಕರ್ತವ್ಯ ಲೋಪವೆಸಗುವ ಇತ್ಯಾದಿ ತೊಂದರೆಗಳನ್ನು ನೀಡುತ್ತಿರುವ ಭ್ರಷ್ಟ ಸರ್ಕಾರಿ ಅಧಿಕಾರಿಗಳು/ ಸಾರ್ವಜನಿಕ/ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಅಗತ್ಯ ದಾಖಲಾತಿಗಳೊಡನೆ ದೂರು ನೀಡಿ ಕಾನೂನು ಕ್ರಮ ತೆಗೆದುಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಾದ ಉದೇಶ ಟಿ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.