*ಕನ್ನಡ ರಾಜ್ಯೋತ್ಸವ ಅಂಗವಾಗಿ ಕಾಂಗರೂ ನಾಡಿನಲ್ಲಿ ವಿಕ್ರಂ ಅಯ್ಯಂಗಾರ್ ಗೆ ಕನ್ನಡ ಡಿಂಡಿಮ ಪ್ರಶಸ್ತಿ*
ಮೈಸೂರು: ಮೆಲ್ಬೋರ್ನ್ ಕನ್ನಡ ಸಂಘ
69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್
ನಗರದ ಸ್ಟ್ರಿಂಗ್ವೆಲ್
ಟೌನ್ ಹಾಲ್ ನಲ್ಲಿ
ನ 24 ನೇ ತಾರೀಕು ನಡೆಯುವ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕಾಂಗರೂ ನಾಡಿನಲ್ಲಿ ಕನ್ನಡ ಡಿಂಡಿಮ’ ಕನ್ನಡ ಕಾರ್ಯಕ್ರಮದಲ್ಲಿ ಮೈಸೂರಿನಲ್ಲಿ 18 ವರ್ಷದಿಂದ ನಿರಂತರವಾಗಿ ಹಲವಾರು ಸಂಘಟನೆಯಲ್ಲಿ ಸೇವೆ ಮಾಡುತ್ತಿರುವ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರದ ವಿಕ್ರಂ ಅಯ್ಯಂಗಾರ್ ರವರಿಗೆ ಸಂಘಟನಾ ಕ್ಷೇತ್ರದಿಂದ ಕನ್ನಡ ಡಿಂಡಿಮ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ಜೆ ಎಚ್ ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ