98ಶ್ರೀ ಮದ್ಭಗವದ್ಗೀತಾ : 10
9.ಯಂ ಬ್ರಹ್ಮಾ ವರುಣೇಂದ್ರ ರುದ್ರಮರುತಃ ಸ್ತುನ್ವಂತಿ ದಿವೈಃ ಸ್ತವೈ:
ವೇದ್ಯ ಸ್ಯಾಂಗ ಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾಃ।
ಧ್ಯಾನಾವಸ್ಥಿತ ತದ್ಧತೇನ ಮನಸಾ ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ವಿದುಸ್ಸುರಾ ಸುರಗಣಾಃ ದೇವಾಯ ತಸ್ಮೈ ನಮಃ।
ಇಂತಹವನು ಎಂದು ಹೇಳಲು ಸಾಧ್ಯವಾಗದ ಒಬ್ಬ ದೇವನಿದ್ದಾನೆ. ಬ್ರಹ್ಮದೇವನು, ವರುಣನು, ಇಂದ್ರನು, ರುದ್ರನು, ವಾಯುದೇವನು, ಆತನನ್ನು ದಿವ್ಯಸ್ತೋತ್ರಗಳಿಂದ ಸ್ತುತಿಮಾಡುತ್ತಿರುತ್ತಾರೆ. ವೇದಗಾನ ಸಮರ್ಥರಾದ ಮಹರ್ಷಿಗಳು ಪದವು, ಕ್ರಮವು, ಉಪನಿಷತ್ತುಗಳು ಮುಂತಾದ ಅಂಗಗಳಿಂದ ಕೂಡಿದ ವೇದಗಳಿಂದ ಆತನನ್ನೇ ಕೀರ್ತಿಸುತ್ತಿರುತ್ತಾರೆ. ಮಹಾಯೋಗಿಗಳು ಧ್ಯಾನಸ್ಥಿತಿಯಲ್ಲಿ ತದೇಕ ಲಗ್ನವಾದ ಮನಸ್ಸಿನಿಂದ ಆತನನ್ನೇ ದರ್ಶಿಸುತ್ತಿರುತ್ತಾರೆ. ದೇವತೆಗಳಿಗೂ, ರಾಕ್ಷಸರಿಗೂ ಕೂಡ ಆತನ ಕೊನೆ ಯಾವುದೋ ತಿಳಿಯದು. ಅಂತಹ ಆ ಸ್ವಯಂಪ್ರಕಾಶಮಾನ ದೇವನಿಗೆ ನಮಸ್ಕಾರವು.
10.ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್।
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್॥
ನರರಿಗೆ (ಜೀವಿಗಳಿಗೆ) ಕೊನೆಯ ಗತಿಯಾದ ನಾರಾಯಣ ಮಹರ್ಷಿಗೆ, ನರರಲ್ಲಿ (ಜೀವಿಗಳಲ್ಲಿ) ಉತ್ತಮನಾದ ನರನಿಗೆ, ಸ್ವಯಂಪ್ರಕಾಶಮಾನಳಾದ ಸರಸ್ವತೀದೇವಿಗೆ, ವ್ಯಾಸನಿಗೆ ನಮಸ್ಕರಿಸಿ, ಆನಂತರ ‘ಜಯವು’ ಎಂಬ ಹೆಸರುಳ್ಳ ಮಹಾಭಾರತವನ್ನು, ಇತರ ಪುರಾಣಗಳನ್ನೂ ಕೂಡಾ ಪಠಿಸಬೇಕು. (ಅಥವಾ ನಾರಾಯಣಮಹರ್ಷಿಗೆ ನರಮಹರ್ಷಿಗೆ, ಸರಸ್ವತೀದೇವಿಗೆ ನಮಸ್ಕರಿಸಿ, ಅವರಿಗೆ ಜಯಕಾರವನ್ನು ಹೇಳಬೇಕು). (ಇದರಲ್ಲಿ ‘ವ್ಯಾಸಂ’
ಧ್ಯಾನಶ್ಲೋಕಗಳು ಎಂಬ ಪದವು ಆ ಮಹರ್ಷಿಯು ರಚಿಸಿದ ಶ್ಲೋಕದಲ್ಲಿ ಇಲ್ಲ. ಆನಂತರದ ಭಕ್ತರು ಅದನ್ನು ಸೇರಿಸಿದರು.)
11.ಸಚ್ಚಿದಾನಂದರೂಪಾಯ ಕೃಷ್ಣಾಯಾಕ್ಲಿಷ್ಟ ಕಾರಿಣೇ।
ನಮೋ ವೇದಾಂತ ವೇದ್ಯಾಯ ಗುರವೇ ಬುದ್ದಿ ಸಾಕ್ಷಿಣೇ॥
ಸಚ್ಚಿದಾನಂದಸ್ವರೂಪನೂ, ಕೆಲಸಗಳನ್ನು ಸುಲಭವಾಗಿ ಜಾಣತನದಿಂದ ಮಾಡುವವನೂ, ಉಪನಿಷತ್ತುಗಳ ಮೂಲಕ ತಿಳಿದುಕೊಳ್ಳತಕ್ಕವನೂ, ಜೀವಿಗಳ ‘ಮನಸ್ಸುಗಳಿಗೆ ಸಾಕ್ಷಿಯೂ ಆದ ಶ್ರೀಕೃಷ್ಣ ಗುರುವಿಗೆ ನಮಸ್ಕಾರವು.
12.ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ॥
ಉಪನಿಷತ್ತುಗಳೆಲ್ಲವೂ ಸೇರಿಸಿ ಒಂದು ಗೋವು. ಹಾಲು ಕರೆಯುವವನು ಶ್ರೀಕೃಷ್ಣನು. ಅರ್ಜುನನೇಕರು. ಸದ್ಭುದ್ಧಿಯುಳ್ಳವರೆಲ್ಲರೂ ಆ ಹಾಲಿಗೆ ಭಾಗಸ್ಥರೇ. ಮಹತ್ತರವಾದ ಗೀತಾಮೃತವೇ ಆ ಹಾಲು.
13.ಗೀತಾಶಾಸ್ತ್ರಮಿದಂ ಪುಣ್ಯಂ ಯಃಪಠೇತ್ ಪ್ರಯತಃಪುಮಾನ್ ।
ವಿಷ್ಟೋಃ ಪದಮವಾಪ್ಪೋತಿ ಭಯಶೋಕಾದಿ ವರ್ಜಿತಃ ||
ಈ ಗೀತಾಶಾಸ್ತ್ರವು ಪರಮಪವಿತ್ರವಾದುದು. ನಿಯಮವು, ಪ್ರಯತ್ನವು ಉಳ್ಳವನಾಗಿ ಇದನ್ನು ಅಧ್ಯಯನ ಮಾಡುವವನು, ಭಯವು, ಶೋಕವು ಮೊದಲಾದ ಸಂಸಾರಬಂಧನಗಳು ತೊಲಗಿ ವಿಷ್ಣುಸನ್ನಿಧಿಯನ್ನು ಪಡೆಯುತ್ತಾನೆ.
14.ಏಕಂ ಶಾಸ್ತ್ರಂ ದೇವಕೀ ಪುತ್ರಗೀತಂ ಏಕೋ ದೇವೋ ದೇವಕೀ ಪುತ್ರ ಏವ ।
ಏಕೋ ಮಂತ್ರ ಸ್ತಸ್ಯ ನಾಮಾನಿ ಯಾನಿ
ಕರ್ಮಾತ್ಯೇಕಂ ತಸ್ಯ ದೇವಸ್ಯ ಸೇವಾ ।।
ದೇವಕೀಪುತ್ರನಾದ ಶ್ರೀಕೃಷ್ಣನು ಗಾನ ಮಾಡಿದ ಗೀತೆಯೊಂದೇ ನಮಗೆ ಶಾಸ್ತ್ರವು, ಆ ದೇವಕೀ ದೇವಿ ಪುತ್ರನೇ ನಮಗೆ ಏಕೈಕ ದೇವನು. ಆತನ ನಾಮಗಳೇ ನಮಗೆ ಮಂತ್ರಗಳು. ಆ ದೇವನ ಸೇವೆಯೊಂದೇ ನಮ್ಮ ಕೆಲಸ (ವಿಹಿತಕರ್ಮ ) .
ಜಯತು ಜಯತು ಗೀತಾ ಕೃಷ್ಣ ವಸಕ್ತ್ರ ಪ್ರಭೂತಾ
ಜಯತು ಜಯತು ಗೀತಾ ಸರ್ವಲೋಕೈಕ ಮಾತಾ।
ಜಯತು ಜಯತು ಗೀತಾ ದೈವಸಂಪತ್ಪ್ರಪೂತಾ
ಜಯತು ಜಯತು ಗೀತಾ ವಿಶ್ವಶಾಂತಿ ಪ್ರಸೂತಾ||
ಶ್ರೀಕೃಷ್ಣನ ಬಾಯಿಂದ ಆವಿರ್ಭವಿಸಿದ ಗೀತೆಗೆ ಜಯವು. (ಜಯವು = ಎಲ್ಲಕ್ಕಿಂತಲೂ ಹೆಚ್ಚಾಗಿ ವೃದ್ಧಿಯಾಗುವುದು) ಸರ್ವಲೋಕಗಳಿಗೂ ತಾಯಿಯಾದ ಗೀತೆಗೆ ಜಯವು ಜಯವು. ದೈವೀಸಂಪತ್ತಿನಿಂದ ಪವಿತ್ರತೆಯನ್ನು ಉಂಟುಮಾಡುವ ಗೀತೆಗೆ ಜಯವು ಜಯವು. ವಿಶ್ವಶಾಂತಿಗೋಸ್ಕರ ಅವತರಿಸಿದ ಗೀತೆಗೆ ಜಯವು ಜಯವು.
ಯಸ್ಮಾದ್ಧರ್ಮಮಯೀ ಗೀತಾ ಸರ್ವಜ್ಞಾನ ಪ್ರಯೋಜಿಕಾ।
ಸರ್ವಶಾಸ್ತ್ರಮಯೀ ಗೀತಾ ತಸ್ಮಾದ್ಗೀತಾ ವಿಶಿಷ್ಯತೇ ।।
ಗೀತೆಯು ಧರ್ಮದಿಂದ ತುಂಬಿರುವುದು. ಗೀತೆಯು ಸಮಸ್ತ ಜ್ಞಾನವನ್ನೂ ಉಂಟುಮಾಡುವುದು. ಗೀತೆಯು ಸರ್ವಶಾಸ್ತ್ರಗಳಿಂದಲೂ ತುಂಬಿರುವುದು. ಆದ್ದರಿಂದ ಗೀತೆಯು ಎಷ್ಟೋ ವಿಶಿಷ್ಟವಾದದ್ದು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ