ಮೈಸೂರು-ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಹಾಗೂ ಪರಿಸರ ಪ್ರೇಮಿಗಳು ಸೇರಿ ಚಾಮುಂಡಿ ಬೆಟ್ಟದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೊಂದರೆ ಆಗಬಾರದು ಎಂದು
ADC ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಮೂಲಕ,
ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಕೆಲಸವನ್ನು ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಿಲ್ಲಿಸಿದ್ದೇವೆ,
ಆದ್ದರಿಂದ ಇನ್ನು ಮುಂದೆ ಚಾಮುಂಡಿ ಬೆಟ್ಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಭಿವೃದ್ಧಿಗಳನ್ನು ಮಾಡಬಾರದು ಹಾಗೂ ಕೆಲಸ ನಡೆಯುತ್ತಿರುವ ಜಾಗಕ್ಕೆ,
ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಕಣ್ಣಾರೆ ನೋಡಿ, ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಮುಂದಾಗದೆ ಇರುವುದು ದುರಂತವೇ ಸರಿ, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿರುವುದು ,
ಜಿಲ್ಲಾಧಿಕಾರಿಗಳು, ತಹಶೀಲ್ದಾರ್ , ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಮೂಡ ಅಧ್ಯಕ್ಷರು , ಆದರೆ ಇವರುಗಳು ಇಂತಹ ಅಕ್ರಮಗಳನ್ನು ಭೇದಿಸಬೇಕು, ಯಾಕೆ ಸುಮ್ಮನೆ ಹೋಗಿರುವುದು ವಿಪರ್ಯಾಸ
ಎಂದು ತಿಳಿಸಿ,ರುವ ಸಂಘಟನೆ
ಕೆಲಸ ಮಾಡಿರುವ ವಿಡಿಯೋ ತೋರಿಸಿ
ಮನವಿ ನೀಡಿದಾಗ, ಅಪಾರ ಜಿಲ್ಲಾಧಿಕಾರಿಗಳು ಅತಿ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಬೇಕು ಎಂದು,
ಅವರ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ ,
ಹಾಗೂ ಚಾಮುಂಡಿ ಬೆಟ್ಟದ ಉಳಿವಿಗಾಗಿ ನಿಮ್ಮ ಜೊತೆ ನಾವಿದ್ದೇವೆ ಎಂದು ಭರವಸೆ ಕೊಟ್ಟಿದ್ದಾರೆ,
ಇದೆ ಸಂದರ್ಭದಲ್ಲಿ ಮೈಸೂರು ಹೃದಯವಂತ ಕನ್ನಡಿಗರ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಿಪಿಕೆ ಪರಮೇಶ್, ಪರಿಸರ ಪ್ರೇಮಿಗಳು ಭಾನು ಮೋಹನ್, ಸಾಮಾಜಿಕ ಹೋರಾಟಗಾರ ಕುಮಾರ್ ಉಪಸ್ಥಿತರಿದ್ದರು.🙏