ಗೀತೆ 9 : ಮಹಾಭಾರತ ನದಿ, ದುರ್ಯೋಧನ ಸುಳಿ, ಕೃಷ್ಣ ನಾವಿಕ, ಪಾಂಡವರು ?
ಶ್ರೀಮದ್ಭಗವದ್ಗೀತಾ : 9 5.ಭೀಷ್ಮದ್ರೋಣ ತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ ಶಲ್ಯ ಗ್ರಾಹವತೀ ಕೃಪೇಣವಹನೀ ಕರ್ಣೇನ ವೇಲಾಕುಲಾ | ಅಶ್ವತ್ಥಾಮ ವಿಕರ್ಣ ಘೋರಮಕರಾ ದುರ್ಯೋಧನಾವರ್ತಿನೀ ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || ಮಹಾಭಾರತ ಯುದ್ಧವೆಂಬ ಮಹಾನದಿಯನ್ನು ಪಾಂಡವರು ದಾಟಿದರು. ಆ ನದಿಯು ಎಂತಹದ್ದೆಂದರೆ ಭೀಷ್ಮನು, ದ್ರೋಣನು ಎಂಬುವವರು, ಅದಕ್ಕೆ ಎರಡು ಕಡೆ ಇರುವ ತಟಗಳು. ಜಯದ್ರಥನೇ (ಸೈಂಧವನೇ) ಅದರಲ್ಲಿನ ನೀರು. ಗಾಂಧಾರೀ ಪುತ್ರರು ಅದರಲ್ಲಿನ ಕಪ್ಪು ನೈದಿಲೆಗಳು. ಶಲ್ಯನೇ ಅದರಲ್ಲಿರುವ ಕಾಲುಗಳನ್ನು ಸರಪಣಿಯಂತೆ ಹಿಡಿದುಕೊಳ್ಳುವ ಕ್ರೂರಜಲಜಂತುವು….