ಮಹಿಳಾ ಪ್ರಯಾಣಿಕರ ಮಾಂಗಲ್ಯ ಸರಗಳನ್ನು ಕಳ್ಳತನ; ಮಹಿಳಾ ಆರೋಪಿ ಬಂಧನ
ಲಷ್ಕರ್ ಠಾಣಾ ಪೊಲೀಸರಿಂದ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್‌ನಲ್ಲಿ ಮಹಿಳಾ ಪ್ರಯಾಣಿಕರ ಮಾಂಗಲ್ಯ ಸರಗಳನ್ನು ಕಳ್ಳತನ ಮಾಡುತ್ತಿದ್ದ ಒಬ್ಬ ಮಹಿಳಾ ಆರೋಪಿಯ ಬಂಧನ, ಒಟ್ಟು 3,90,000/- ರೂ ಮೌಲ್ಯದ 56 ಗ್ರಾಂ ತೂಕದ 02 ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ. ಮೈಸೂರು ನಗರದ ಲಷ್ಕರ್ ಠಾಣಾ ವ್ಯಾಪ್ತಿಯ ಗ್ರಾಮಾಂತರ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಲಷ್ಕರ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು…