ಸಿ ಟಿ ರವಿಯವರನ್ನು ತಕ್ಷಣವೆ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ರವಿಯವರು ತನಿಖೆಗೆ ಸಹಕಾರ ನೀಡಬೇಕೆಂದು ಶರತ್ತು ವಿಧಿಸಿದೆ. ತನಿಖಾಧಿಕಾರಿ ವಿಚಾರಣೆಗೆ ಕರೆದಾಗ ಬರಬೇಕೆಂದು ಆದೇಶ ನೀಡಿದೆ. 7 ವರ್ಷಕ್ಕೂ ಕಡಿಮೆ ಅವಧಿಯ ಶಿಕ್ಷಾರ್ಹವಾದ್ದರಿಂದ ನೋಟಿಸ್ ನೀಡಬೇಕಿತ್ತು ಎನ್ನುವ ವಿಚಾರವನ್ನು ಗಮನಿಸಿದೆ.
ನಿನ್ನೆ ವಿಧಾನಮಂಡಲದಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದರೆಂದು ಬಿಜೆಪಿ ಎಂ ಎಲ್ ಸಿ ಸಿ ಟಿ ರವಿಯವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿತ್ತು.