ಕವನ ಸಂಗ್ರಹ : ಬುದ್ಧಿ ಮಾತು ಕೇಳಿ – ಕವಿಯಿತ್ರಿ. ಆಶಾಲತ

Ashalatha
Spread the love

ಮಕ್ಕಳ ದಿನಾಚರಣೆಯ ಪ್ರಯುಕ್ತ

” ಬುದ್ದಿ ಮಾತು ಕೇಳಿ “

ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ
ಹೆತ್ತವರ ಅಂಕೆಯಲ್ಲಿ ಬೆಳೆಯಿರಿ
ಶಿಸ್ತು -ಸಂಯಮ, ಆಚಾರ -ವಿಚಾರ ಸಂಸ್ಕೃತಿ -ಸಂಪ್ರದಾಯಗಳ ಪ್ರತೀಕವಾಗಿರಿ
ನಾಡು -ನುಡಿ, ದೇಶ -ಭಾಷೆಯ
ಬಾಂಧವರಾಗಿ ಬಾಳಿರಿ
ಸದ್ಭುದ್ದಿಗಳ ಕಲಿತು
ಸತ್ಪ್ರಜೆಗಳಾಗಿ ಮುನ್ನಡೆಯಿರಿ ||1||

ತಾಯ್ತಂದೆಯರ ಭವಿಷ್ಯದರಮನೆಯ ಅರಸರಾಗಿರಿ
ಅವರ ಆಕಾಂಕ್ಷೆ ಗಳ, ಕನಸುಗಳ
ನನಸಾಗಿಸಿರಿ
ನಯ- ವಿನಯ, ಸದ್ಗುಣ -ಸನ್ನಡತೆಯ ಆಗರವಾಗಿರಿ
ಬಾಳಿನಲ್ಲಿ ಗುರಿಯನ್ನು ಹೊಂದಿ
ಗುರುವಿನ ಮಾರ್ಗದರ್ಶನದಿ ಸಾಗಿರಿ
ಹೆತ್ತವರನ್ನು, ವಿದ್ಯೆ ಕಲಿಸಿದ ಗುರುವ ನಿಮ್ಮ ಉಸಿರಿರುವವರೆಗೆ ಮರೆಯದಿರಿ
ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ ||2||

“ಮಾತೃದೇವೋಭವ ”
“ಪಿತೃದೇವೋಭವ ”
“ಆಚಾರ್ಯ ದೇವೋಭವ ”
ಎಂಬ ನುಡಿಗಳ ಕಾಯ, ವಾಚ, ಮನಸ ಪಾಲಿಸಿರಿ
ಜೀವನ ಪಯಣದಿ ಇತರರಿಗೆ
ಕೇಡೆಣಿಸದೆ, ನೋವು ನೀಡದೆ
ಸನ್ಮಾರ್ಗದಲ್ಲಿ ನಡೆಯಿರಿ
ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ ||3||

“ಪರೋಪಕಾರಂ ಇದಮಿತ್ತ ಶರೀರಂ ” ಎಂಬoತೆ ಈ ಬುವಿಯ ಮೇಲೆ ಇರುವಷ್ಟು ದಿವಸ ಪರೋಪಕಾರಿಗಳಾಗಿ ಬಾಳ್ವೆ ನಡೆಸಿರಿ
ನೀವ್ ಅಳಿದರೂ ನಿಮ್ಮ ಹೆಸರು’
ಸುಕಾರ್ಯಗಳು ಈ ಜಗದಲ್ಲಿ
ಚಿರವಾಗಿ ಉಳಿಯುವಂತೆ ನೀವ್ ಬಾಳಿರಿ
ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿ ದೇಶವ ಮುನ್ನಡೆಸುವ ನಿಸ್ವಾರ್ಥ ಪ್ರಭುಗಳಾಗಿ ನೀವ್
ಬೆಳೆಯಿರಿ||4||

ರಚನೆ : ಎಂ. ಎಸ್. ಆಶಾಲತಾ
ಶಿವೆ ಸುತೆ ( ಚನ್ನಪಟ್ಟಣ)
ಶಾಖಾ ವ್ಯವಸ್ಥಾಪಕರು
ಎಂ. ಡಿ. ಸಿ ಸಿ. ಬ್ಯಾಂಕ್
ಕೆ. ಹೊನ್ನಲಗೆರೆ