ಬಾಂಗ್ಲಾದೇಶ ವಿರುದ್ಧ ಪ್ರತಿಭಟಿಸಿದ ವಿಶ್ವ ಹಿಂದೂ ಪರಿಷತ್

Spread the love

 

ಬಾಂಗ್ಲಾದೇಶ ವಿರುದ್ಧ ಪ್ರತಿಭಟಿಸಿದ ವಿಶ್ವ ಹಿಂದೂ ಪರಿಷತ್

ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಮೈಸೂರು ನಗರ ಜಿಲ್ಲಾ ಘಟಕ ವತಿಯಿಂದ ಬಾಂಗ್ಲಾದೇಶ ವಿರುದ್ಧ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿಗಳ
ಮುಖೇನ ರಾಷ್ಟ್ರಪತಿಗಳಿಗೆ ಬಾಂಗ್ಲಾದೇಶದ ಹಿಂದುಗಳಿಗೆ ರಕ್ಷಣೆ ನೀಡುವಂತೆ ಹೊತ್ತಾಯಿಸಿದ್ದಾರೆ

ಬಲಿಕ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಮಹೇಶ್ ಕಾಮತ್

ಭಾರತದ ಹಿಂದೂಗಳು ಯಾವಾಗಲೂ ಶಾಂತಿ ಪ್ರೀಯರು ಮತ್ತು ಎಲ್ಲಾ ಧರ್ಮದ ಜನರ ಜೊತೆ ಹೊಂದಾಣಿಕೆಯಿಂದ ಬದುಕುವವರು

ಹಿಂದುಗಳು ಎಲ್ಲಾ ದರ್ಮೀಯರ ಜೊತೆ ಉತ್ತಮ ಸಾಮರಸ್ಯದ ಜೊತೆ ಶಾಂತಿಪ್ರೀಯರಾಗಿಯೇ ಇರಲು ಬಯಸುತ್ತಾರೆ.

ಆದರೆ ಬಾಂಗ್ಲಾದೇಶದಲ್ಲಿ, ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿ ಅಂಶಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ, ಹಿಂದೂ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂ ಆಸ್ತಿಗಳನ್ನ ಗುರಿಯಾಗಿಸಿ ನಾಶಮಾಡುವುದು ಇನ್ನೂ ಮುಂದುವರೆದಿದೆ. ಅವರನ್ನು ತಡೆಯಲು ಸರಕಾರ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ವಿಶ್ವ ಸಮುದಾಯ ಮತ್ತು ಭಾರತ ಸರ್ಕಾರ ನಿರೀಕ್ಷೆಯಂತೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ ಭದ್ರತೆ ಮತ್ತು ಸಂಘಟನೆಗಾಗಿ ಹಿಂದೂ ಸಮಾಜವನ್ನು ಜಾಗೃತಗೊಳಿಸಿದ ನಾಯಕ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದೆ ಮತ್ತು ಜಾಮೀನು ಸಹ ನಿರಾಕರಿಸಲಾಗಿದೆ.

ಈ ಬಂಧನವನ್ನು ವಿರೋಧಿಸಿ, ಹಿಂದೂ ನಾಯಕನ ಬಿಡುಗಡೆಗೆ ಒತ್ತಾಯಿಸಿ ಹಾಗೂ ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ಇಂದು ಮೈಸೂರು ವಿಶ್ವ ಹಿಂದೂ ಪರಿಷತ್ ಹಾಗೂ ಹಲವಾರು ಸಂಘ ಸಂಸ್ಥೆ ಈ ಘಟನೆಯನ್ನ ಖಂಡಿಸುತ್ತೇವೆ

ಸದಾ ಎಲ್ಲಾ ರೀತಿಯ ಜನರಿಗೆ ಉಚಿತ ಊಟ ಬಡಿಸುವ ಇಂತವರ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮವನ್ನ ಮೈಸೂರು ವಿಶ್ವ ಹಿಂದೂ ಪರಿಷತ್ ಖಂಡಿಸಿ ಈ ಕೂಡಲೇ ವಿಶ್ವ ಸಂಸ್ಥೆ ಮದ್ಯ ಪ್ರವೇಶಿಸಿ ಇವರನ್ನ ಬಿಡುಗಡೆ ಮಾಡಲು ಸಹಕರಿಸಿ ಹಿಂದುಗಳ ಹಾಗೂ ದೇವಸ್ಥಾನದ ಭದ್ರತೆಗೆ ಸಹಕರಿಸಬೇಕೆಂದು ಆಗ್ರಹಿಸುತ್ತದೆ.

ಜಿಲ್ಲಾದ್ಯಕ್ಷರು
ಕೆ ಮಹೇಶ ಕಾಮತ್ ,ಉಪಾದ್ಯಕ್ಷರು ಅಂಬಿಕಾ , ಕಾರ್ಯದರ್ಶಿ
ಮದು ಶಂಕರ , ಮಮತಾ ಜೀ, ಬಾಜಪ ರಾಷ್ಟ್ರೀಯ ಸದಸ್ಯರು
ಸವಿತಾ ಘಾಟ್ಕೆ,
ಗೋಪಾಲ ಜೀ , ಶಿವಕುಮಾರ, ವಿಜಯೇಂದ್ರ , ರಾದಾಕ್ರಷ್ಣ ಜೀ ಆರ್,
ಸಹ ಕಾರ್ಯದರ್ಶಿ,
ಎಸ್, ಜಯಶ್ರೀ, ಜಿ ಚೇತನ, ಮಂಜುನಾಥ, ಹಾಗೂ ಹಲವಾರು ಹಿಂದು ಪರ ಸಂಘಟಣೆಯ ಸದಸ್ಯರು ಹಾಜರಿದ್ದರು