ಗೀತೆ : 94
20. ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ।
ಕರ್ಮಣ್ಯಭಿ-ಪ್ರವೃತ್ತೋಽಪಿ ನೈವ ಕಿಂಚಿತ್ ಕರೋತಿ ಸಃ॥
ಕರ್ಮಫಲಾಸಂಗಂ = ಕರ್ಮಫಲದಲ್ಲಿ ಆಸಕ್ತಿಯನ್ನು, ತ್ಯಕ್ತ್ವಾ = ಬಿಟ್ಟು, ನಿತ್ಯತೃಪ್ತಃ = ಯಾವಾಗಲೂ ತೃಪ್ತಿಯಾಗಿಯೇ ಇರುತ್ತಾ, ನಿರಾಶ್ರಯಃ = ಯಾವ ವ್ಯಕ್ತಿಯನ್ನಾಗಲಿ, ಯಾವ ಪದಾರ್ಥವನ್ನಾಗಲಿ, ಆಶ್ರಯಿಸದೇ ಇರುವ, ಸಃ = ಆ ಜೀವನ್ಮುಕ್ತನು, ಕರ್ಮಣಿ = ಕರ್ಮದಲ್ಲಿ, ಅಭಿಪ್ರವೃತ್ತಃ-ಅಪಿ = ಅತ್ಯಂತ, ಆಳವಾಗಿ ಪ್ರವರ್ತಿಸುವವನು ಆಗಿದ್ದರೂ, ಕಿಂಚಿತ್ = ಸ್ವಲ್ಪವೂ ಕೂಡ, ನ-ಕರೋತಿ-ಏವ = ಮಾಡುತ್ತಲೇ ಇಲ್ಲ. ಅರ್ಜುನನೆ! ಸಾಧಕನು ಮೂರು ಮೆಟ್ಟಿಲನ್ನು ಸಾಧಿಸಬೇಕು.
- ಆತನು ಕರ್ಮಫಲಗಳ ಮೇಲೆ ಆಸಕ್ತಿಯನ್ನು ಬಿಟ್ಟುಬಿಡಬೇಕು.
- ಎಲ್ಲಾ ಕಾಲದಲ್ಲಿಯೂ ತನ್ನೊಂದಿಗೆ ತಾನೇ, ತನ್ನೊಳಗೆ ತಾನೇ, ತೃಪ್ತಿಯಾಗಿ ಇರಬೇಕು..
- ಮಾನಸಿಕವಾಗಿ ಯಾವ ದೃಶ್ಯಪದಾರ್ಥದ ಮೇಲಾಗಲಿ, ಯಾವ ವ್ಯಕ್ತಿಯ ಮೇಲಾಗಲಿ, ಆಧಾರಪಟ್ಟುಕೊಂಡು ಇರಬಾರದು.
ಈ ಮೂರು ಮೆಟ್ಟಿಲನ್ನೂ ಸಾಧಿಸಿದವನು ಪರಿಪೂರ್ಣ ಬ್ರಹ್ಮಜ್ಞಾನಿಯೇ ಆಗುವನು. ಅಂತಹವನು ಎಷ್ಟು ವಿಧವಾದ ಕರ್ಮಗಳನ್ನು ಎಷ್ಟು ಆಳವಾಗಿ ಮಾಡಿದರೂ ಸರಿಯೇ, ಸ್ವಲ್ಪ ಕೂಡ ಮಾಡದಂತೆಯೇ! ಆತನ ಕರ್ಮಗಳೆಲ್ಲವೂ ಅಕರ್ಮಗಳೇ.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ