ಗೀತೆ – 87 : ಗುಣಮಯವಾದ ಸಂಸಾರದಿಂದಿಗೆ ಭಗವಂತನಿಗೆ ಸತ್ಯವಾದ ಸಂಬಂಧವಿಲ್ಲ

Gitacharya
Spread the love

ಶ್ರೀ ಮದ್ಭಗವದ್ಗೀತಾ : 87

13. ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ-ವಿಭಾಗಶಃ।
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರ-ಮವ್ಯಯಮ್‌॥

ಗುಣಕರ್ಮವಿಭಾಗಶಃ = ಗುಣಗಳ, ಕರ್ಮಗಳ, ವಿಭಾಗಗಳನ್ನು ಅನುಸರಿಸಿ, ಚಾತುರ್ವರ್ಣ್ಯಂ = ನಾಲ್ಕು ವರ್ಣಗಳ ಸಮೂಹವು, ಮಯಾ= ಪರಮಾತ್ಮನಾದ ನನ್ನಿಂದ (ಮಾನವಲೋಕದಲ್ಲಿ), ಸೃಷ್ಟಂ = ಸೃಷ್ಟಿ ಮಾಡಲ್ಪಟ್ಟಿದೆ. ತಸ್ಯ = ಆ ಸೃಷ್ಟಿಗೆ, ಕರ್ತಾರಂ-ಅಪಿ = ಕರ್ತನು ಆಗಿದ್ದರೂ ಕೂಡ, ಮಾಂ = ನನ್ನನ್ನು, ಅಕರ್ತಾರಂ = ಕರ್ತನಲ್ಲದವನಂತೆಯೂ, ಅವ್ಯಯಂ = ಸಂಸಾರಸಂಬಂಧವು ಇಲ್ಲದವನಂತೆಯೂ ವಿದ್ಧಿ = ತಿಳಿದುಕೋ.

ಅರ್ಜುನನೆ! ಮಾನವರಲ್ಲಿ ಸತ್ತ್ವರಜಸ್ತಮೋಗುಣಗಳ ಮೇಳನೆಗಳು ಸಂಕೀರ್ಣವಾಗಿ ಇರುತ್ತವೆ. ಇವರಲ್ಲಿ ಇವರಿಗೆ ಪರಸ್ಪರ ಸಹಕಾರವು ಇದ್ದಾಗಲೇ ಇವರ ಲೌಕಿಕ ಸಾಧನೆಗಳಿಗೂ, ಆಧ್ಯಾತ್ಮಿಕ ಸಾಧನೆಗಳಿಗೂ ಕೂಡ ಬೇಗನೆ ಸಿದ್ಧಿ ಲಭಿಸುತ್ತದೆ. ಈ ಸಹಕಾರ ಸೌಲಭ್ಯಕ್ಕಾಗಿಯೇ ಪರಮಾತ್ಮನು ಮೂರು ಗುಣಗಳನ್ನೂ, ಅವುಗಳಿಂದ ಏರ್ಪಡುವ ಕರ್ಮಗಳನ್ನೂ ಕೂಡ ವಿಶ್ಲೇಷಿಸಿ, ನಾಲ್ಕು ವಿಭಾಗಗಳಾಗಿ ಬದಲಾಯಿಸಿ ನಾಲ್ಕು ವರ್ಣಗಳು ಎಂಬ ವ್ಯವಸ್ಥೆಯನ್ನು ಏರ್ಪಾಟು ಮಾಡಿದ್ದಾನೆ. “”ಪರಮಾತ್ಮನು ಹೀಗೆ ಮಾಡಿದ್ದಾನೆ” ಎಂದಿರುವುದು ಕೂಡ ವಿಷಯವು ಸುಲಭವಾಗಿ ಅರ್ಥವಾಗಲು ಹೇಳಿರುವ ಮಾತೇ ಹೊರತು ನಿಜಕ್ಕೆ ಆತನು ಯಾವುದಕ್ಕೂ ಕರ್ತನಲ್ಲ. ಏಕೆಂದರೆ, ಗುಣಮಯವಾದ ಸಂಸಾರದೊಂದಿಗೆ ಆತನಿಗೆ ಸತ್ಯವಾದ ಸಂಬಂಧವಿಲ್ಲ. ಈ ವಿಷಯವನ್ನು ಜಾಗ್ರತೆಯಾಗಿ ಅರ್ಥಮಾಡಿಕೋ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ