ಗೀತೆ – 86 : ಪರಮಾತ್ಮನನ್ನು ಆಶ್ರಯಿಸಿ ಮೋಕ್ಷ ಪಡೆಯಲು ಹೆಚ್ಚಿನ ಸಮಯ ಬೇಕು

Gitacharya
Spread the love

ಶ್ರೀ ಮದ್ಭಗವದ್ಗೀತಾ : 86

12. ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ।
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ॥

(ಮಾನವಾಃ = ಮಾನವರು) ಕರ್ಮಣಾಂ = ತಾವು ಮಾಡುವ ಆಧ್ಯಾತ್ಮಿಕ ಕಾರ್ಯಗಳ, ಸಿದ್ಧಿಂ = ಫಲಪ್ರಾಪ್ತಿಯನ್ನು, ಕಾಂಕ್ಷಂತಃ = ಕೋರುತ್ತಿರುವವರಾಗಿ, ಇಹ = ಈ ಮಾನವಲೋಕದಲ್ಲಿ, ದೇವತಾಃ = ಆಯಾ ದೇವತೆಗಳನ್ನು, ಯಜಂತೇ = ಆರಾಧಿಸುತ್ತಿದ್ದಾರೆ. ಹಿ = ಏಕೆಂದರೆ, ಕರ್ಮಜಾ = ಕರ್ಮಗಳಿಂದಾಗುವ, ಸಿದ್ಧಿಃ = ಫಲಪ್ರಾಪ್ತಿಯು, ಮಾನುಷೇ-ಲೋಕೇ = ಮಾನವಲೋಕದಲ್ಲಿ, ಕ್ಷಿಪ್ರಂ = ಬೇಗನೆ, ಭವತಿ = ಉಂಟಾಗುತ್ತದೆ.

ಅರ್ಜುನನೆ! ಪರಮಾತ್ಮನನ್ನು ಆಶ್ರಯಿಸಿ ನೇರವಾಗಿ ಮೋಕ್ಷವನ್ನು ಪಡೆದುಕೊಳ್ಳಲು ಹೆಚ್ಚಿನ ಸಮಯವಾಗುತ್ತದೆ. ಇತರ ದೇವತೆಗಳನ್ನು ಆರಾಧಿಸಿದರೆ, ಆಯಾ ಕಾಮ್ಯಫಲಿತಗಳು ಬೇಗನೇ ಸಿದ್ಧಿಸುತ್ತವೆ. ಮಾನವಲೋಕದಲ್ಲಿ ಕರ್ಮಗಳು ಬೇಗನೆ ಫಲಿಸುವ ವ್ಯವಸ್ಥೆಯನ್ನು ಪರಮಾತ್ಮನೇ ಏರ್ಪಾಟು ಮಾಡಿದ್ದಾನೆ. ಅದಕ್ಕಾಗಿಯೇ, ಸಾಮಾನ್ಯ ಮಾನವರು ಪರಮಾತ್ಮನನ್ನು ಹಿಡಿದುಕೊಳ್ಳಲಾಗದೆ ಇತರ ದೇವತೆಗಳ ಹಿಂದೆ ಬೀಳುತ್ತಿರುತ್ತಾರೆ.
ಅವತಾರಿಕೆ:
ಶೀಘ್ರವಾದ ಸಿದ್ಧಿಗೋಸ್ಕರ ಮಾನವಲೋಕದಲ್ಲಿ ತಾನು ಮಾಡಿದ ವ್ಯವಸ್ಥೆ ಯಾವುದೋ ಅದನ್ನು ಭಗವಂತನು ವಿವರಿಸುತ್ತಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ