ಗೀತೆ – 80 : ಜನ್ಮಾಂತರಕ್ಕು, ಅವತಾರಕ್ಕು ಇರುವ ವ್ಯತ್ಯಸ

Gitacharya
Spread the love

ಶ್ರೀ ಮದ್ಭಗವದ್ಗೀತಾ : 80

ಶ್ರೀ ಭಗವಾನುವಾಚ:
5. ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ!।
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ!॥

ಪರಂತಪ = ಶತ್ರುಗಳನ್ನು ಸಂಹರಿಸುವ, ಅರ್ಜುನ = ಎಲೈ ಅರ್ಜುನನೆ,
ಮೇ = ನನಗೂ, ತವ-ಚ = ನಿನಗೂ, ಬಹೂನಿ = ಅನೇಕವಾದ, ಜನ್ಮಾನಿ = ಜನ್ಮಗಳು, ವ್ಯತೀತಾನಿ = ಕಳೆದುಹೋಗಿವೆ. ತಾನಿ-ಸರ್ವಾಣಿ = ಅವುಗಳೆಲ್ಲವನ್ನೂ, ಅಹಂ = ನಾನು, ವೇದ = ಬಲ್ಲೆನು. ತ್ವಂ = ನೀನು, ನ-ವೇತ್ಥ = ಅರಿಯೆ.

ಶ್ರೀಭಗವಂತನು ಹೇಳಿದನು :-
ಶತ್ರುಗಳನ್ನು ಸಂಹರಿಸುವುದು ಮಾತ್ರವೇ ಕೈಲಾಗುವ ಎಲೈ ಅರ್ಜುನನೆ! ನಿನಗೂ ಅನೇಕ ಜನ್ಮಗಳು ಕಳೆದುಹೋಗಿವೆೇ. ನನಗೂ ಅನೇಕ ಜನ್ಮಗಳು ಕಳೆದಿವೆ. ಆದರೆ ನಿನ್ನವು ಜನ್ಮಗಳು. ನನ್ನವು ಅವತಾರಗಳು. ನಿನ್ನವು ನಿನ್ನ ಪೂರ್ವ ಪಾಪಪುಣ್ಯಗಳಿಗೆ ಫಲಿತವಾಗಿ ಬರುವ ಜನ್ಮಗಳು. ನನ್ನವು ಮಾತ್ರ ಪಾಪಪುಣ್ಯಗಳಿಗೆ ಅತೀತವಾಗಿ ನನ್ನ ಸಂಕಲ್ಪಾನುಸಾರ ಬರುವ ಜನ್ಮಗಳು. ಹಾಗಾಗಿಯೇ ನನ್ನ ಅವತಾರಗಳು, ನಿನ್ನ ಜನ್ಮಗಳು ಕೂಡ ನನಗೆ ಜ್ಞಾಪಕದಲ್ಲಿ ಇರುತ್ತವೆ. ಅವು ನಿನಗೆ ಜ್ಞಾಪಕದಲ್ಲಿ ಇರುವುದಿಲ್ಲ. ಹಾಗಾಗಿಯೇ, ನೀನು ಈ ಹುಚ್ಚು ಪ್ರಶ್ನೆಯನ್ನು ಮಾಡುತ್ತಿರುವೆ.
ವಿವರಣೆ:
ಇನ್ನು ಅರ್ಜುನನ ಪ್ರಶ್ನೆಯನ್ನು ಆಧಾರವಾಗಿಟ್ಟುಕೊಂಡು, ಸಾಧಾರಣ ಜನ್ಮಕ್ಕೂ, ಅವತಾರಕ್ಕೂ, ಇರುವ ಭೇದವನ್ನು ಸ್ಪಷ್ಟಪಡಿಸುತ್ತಾ, ತನ್ನ ನಿಜವಾದ ತತ್ತ್ವವನ್ನು ಅಂದರೆ ತಾನು ಪ್ರಯೋಗಿಸಿದ “ನಾನು’ ಎಂಬ ಪದದ ನಿಜವಾದ ಅರ್ಥವನ್ನು ಇಲ್ಲಿಂದ ಮುಂದಿನ ಶ್ಲೋಕಗಳಲ್ಲಿ ಕ್ರಮಕ್ರಮವಾಗಿ ವಿವರಿಸಲಿದ್ದಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ