25 – 26 ನೇ ಸಾಲಿನ ಬಜೆಟ್ – ತೆರಿಗೆಯಲ್ಲಿ ಬಾರಿ ವಿನಾಯಿತಿ ಘೋಷಣೆ

Spread the love

ನವದೆಹಲಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025-26ನೇ ಸಾಲಿನ ಬಜೆಟ್ ಅನ್ನು ಶನಿವಾರ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಬದಲಾವಣೆ ತರಬಹುದೆಂಬ ಮಧ್ಯಮ ವರ್ಗದ ನಿರೀಕ್ಷೆಗೆ ಪುಷ್ಟಿ ದೊರೆತಿದೆ. ವಾರ್ಷಿಕ ₹12 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ.
ವಾರ್ಷಿಕ ₹12 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ.
ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದಾಗ, ಆಡಳಿತ ಪಕ್ಷದ ಕಡೆಯಿಂದ ‘ಮೋದಿ… ಮೋದಿ…’ ಎಂಬ ಘೋಷಣೆಯ ನಡುವೆ ಕರತಾಡನ ಕೇಳಿಬಂತು.
ಇದರ ಪರಿಣಾಮವಾಗಿ, ಹೊಸ ರೆಜಿಮ್ ಆಯ್ಕೆ ಮಾಡುವ ತೆರಿಗೆದಾರರಿಗೆ ಯಾವ ರೀತಿ ಪ್ರಯೋಜನವಾಗಲಿದೆ ಎಂದು ಈ ಕೆಳಗಿನಂತೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಸಾರಾಂಶ
₹12 ಲಕ್ಷವರೆಗಿನ ಆದಾಯವಿದ್ದವರಿಗೆ ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ ಆಗಲಿದೆ.
₹18 ಲಕ್ಷದವರೆಗೆ ವಾರ್ಷಿಕ ಆದಾಯ ಇದ್ದವರಿಗೆ ₹70 ಸಾವಿರ ತೆರಿಗೆ ಉಳಿತಾಯವಾಗಲಿದೆ.
₹25 ಲಕ್ಷ ವಾರ್ಷಿಕ ಆದಾಯ ಇದ್ದವರಿಗೆ
₹1,10,000ರಷ್ಟು ತೆರಿಗೆ ಉಳಿತಾಯ ಆಗಲಿದೆ.