ಶ್ರೀ ಮದ್ಭಗವದ್ಗೀತಾ : 120
ಶ್ರೀ ಭಗವಾನುವಾಚ:
2. ಸಂನ್ಯಾಸಃ ಕರ್ಮಯೋಗಶ್ಚ ನಿಶ್ಶ್ರೇಯಸ-ಕರಾವುಭೌ।
ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ॥
ಶ್ರೀಭಗವಾನುವಾಚ = ಶ್ರೀಭಗವಂತನು ಹೇಳಿದನು. ಸಂನ್ಯಾಸಃ = ಗೃಹಸ್ಥಕರ್ಮ ಪರಿತ್ಯಾಗರೂಪವಾದ ಆಶ್ರಮಸಂನ್ಯಾಸವು, ಚ = ಮತ್ತು, ಕರ್ಮಯೋಗಃ = ನಿಷ್ಕಾಮ ಕರ್ಮಯೋಗವು, ಉಭೌ = ಈ ಎರಡೂ ಕೂಡ, ನಿಶ್ರೇಯಸಕರೌ = ಮುಕ್ತಿಯನ್ನು ಉಂಟುಮಾಡುವುವೇ. ತು = ಆದರೆ, ತಯೋಃ = ಆ ಎರಡರಲ್ಲಿಯೂ, ಕರ್ಮಸಂನ್ಯಾಸಾತ್ = ಆಶ್ರಮಸಂನ್ಯಾಸಕ್ಕಿಂತಲೂ, ಕರ್ಮಯೋಗಃ = ನಿಷ್ಕಾಮಕರ್ಮಾನುಷ್ಠಾನವು, ವಿಶಿಷ್ಯತೇ = ಅಧಿಕವಾದದ್ದು.
ಶ್ರೀಭಗವಂತನು ಹೇಳಿದನು :-
ಅರ್ಜುನನೆ! ನೀನು ಮೋಕ್ಷಕಾಮನಾಗಿರುವೆ. ಆದರೆ ಜ್ಞಾನಸಿದ್ಧಿ ಪಡೆದಿಲ್ಲ. ಇಂತಹವರಿಗೆ ಸಂನ್ಯಾಸಾಶ್ರಮ ಸ್ವೀಕರಣವು, ನಿಷ್ಕಾಮಕರ್ಮಯೋಗಾನುಷ್ಠಾನವು ಎಂಬ ಎರಡೂ ಕೆಲಸಕ್ಕೆ ಬರುತ್ತವೆ. ಏಕೆಂದರೆ, ಸಂನ್ಯಾಸಾಶ್ರಮವು ಜ್ಞಾನಸಿದ್ಧಿಯಿಂದ ಮೋಕ್ಷವನ್ನುಂಟುಮಾಡುತ್ತದೆ. ಕರ್ಮಯೋಗವು ಚಿತ್ತಶುದ್ಧಿಯಿಂದ ಜ್ಞಾನಸಿದ್ಧಿಯನ್ನೂ, ಅದರಿಂದ ಮೋಕ್ಷವನ್ನೂ ಉಂಟುಮಾಡುತ್ತದೆ. ಆದರೆ ಈ ಎರಡರಲ್ಲಿಯೂ ನಿನ್ನಂತಹವರಿಗೆ ಆಶ್ರಮಸಂನ್ಯಾಸಕ್ಕಿಂತಲೂ ನಿಷ್ಕಾಮಕರ್ಮಯೋಗಾನುಷ್ಠಾನವೇ ಶ್ರೇಷ್ಠವಾದದ್ದು.
(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
* ಸಂಗ್ರಹ – ಭಾಲರಾ