ಗೀತೆ – 114 : ಶ್ರದ್ಧೆ , ತತ್ಪರತೆ, ಸಂಯತೇಂದ್ರಿಯತ್ವ

Gitacharya
Spread the love

ಶ್ರೀ ಮದ್ಭಗವದ್ಗೀತಾ : 114

39. ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರ ಸ್ಸಂಯತೇಂದ್ರಿಯಃ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಂ ಅಚಿರೇಣಾಧಿ-ಗಚ್ಛತಿ॥

ಶ್ರದ್ಧಾವಾನ್‌ = ಶ್ರದ್ಧೆಯುಳ್ಳವನೂ, ತತ್ಪರಃ = ತದೇಕ ದೀಕ್ಷೆಯುಳ್ಳವನೂ, ಸಂಯತೇಂದ್ರಿಯಃ = ಚೆನ್ನಾಗಿ ನಿಗ್ರಹಿಸಲ್ಪಟ್ಟ ಇಂದ್ರಿಯಗಳುಳ್ಳವನೂ, ಆದ ಸಾಧಕನು, ಜ್ಞಾನಂ = ಬ್ರಹ್ಮಜ್ಞಾನವನ್ನು, ಲಭತೇ = ಹೊಂದುತ್ತಿದ್ದಾನೆ. ಜ್ಞಾನಂ = ಬ್ರಹ್ಮಜ್ಞಾನವನ್ನು, ಲಬ್ಧ್ವಾ = ಹೊಂದಿ, ಅಚಿರೇಣ = ಶೀಘ್ರದಲ್ಲಿಯೇ, ಪರಾಂ = ಸರ್ವೋನ್ನತವಾದ, ಶಾಂತಿಂ = ಶಾಂತಿಯೆನ್ನಲ್ಪಡುವ ಮೋಕ್ಷವನ್ನು, ಅಧಿಗಚ್ಛತಿ = ಪಡೆಯುತ್ತಿದ್ದಾನೆ.

ಅರ್ಜುನನೆ! ಬ್ರಹ್ಮಜ್ಞಾನಪ್ರಾಪ್ತಿಗೋಸ್ಕರ ಗುರುಗಳ ಹತ್ತಿರಕ್ಕೆ ಹೋಗಬೇಕೆಂದೂ, ಅವರಿಗೆ ವಂದನೆಗಳು, ಸೇವೆಗಳು ಮಾಡಬೇಕೆಂದೂ, ಆಳವಾಗಿ ಪ್ರಶ್ನಿಸಬೇಕೆಂದೂ, 34ನೆಯ ಶ್ಲೋಕದಲ್ಲಿ ಹೇಳಿದ್ದೇನೆ. ಅವುಗಳಿಗಿಂತ ಮುಖ್ಯವಾದ ಜ್ಞಾನಪ್ರಾಪ್ತಿಯ ಉಪಾಯಗಳನ್ನು ಈಗ ಹೇಳುತ್ತೇನೆ ಕೇಳು. ಆತ್ಮಜ್ಞಾನವನ್ನು ಬಯಸುವವರಿಗೆ ಮೂರು ಪ್ರಧಾನ ಗುಣಗಳಿರಬೇಕು.
1. ಶ್ರದ್ಧೆ – ಅಂದರೆ, ವಿಶ್ವಾಸದಿಂದ ಕೂಡಿದ ಆದರಭಾವ.
2. ತತ್ಪರತೆ – ಅಂದರೆ, ತದೇಕ ದೀಕ್ಷೆ
3. ಸಂಯತೇಂದ್ರಿಯತ್ವವು- ಅಂದರೆ, ಅತಿ ತೀವ್ರವಾದ
ಇಂದ್ರಿಯನಿಗ್ರಹವು.
ಈ ಮೂರು ಲಕ್ಷಣಗಳೂ ಇರುವವನಿಗೇ ಬ್ರಹ್ಮಜ್ಞಾನವು ಸಿದ್ಧಿಸುತ್ತದೆ. ಅದು ಸಿದ್ಧಿಸಿದರೆ, ಆತನಿಗೆ ಕೂಡಲೇ ಸರ್ವೋನ್ನತವಾದ ಶಾಂತಿಯು ಲಭಿಸುವುದು. ಅಂದರೆ, ಮೋಕ್ಷವು ಲಭಿಸುವುದು.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ