ಗೀತೆ – 113 : ಚಿತ್ತಶುದ್ಧಿ, ಯೋಗ ಸಂಸಿದ್ಧಿ, ಪರಮಾತ್ಮಜ್ಞಾನ ಪಡೆದುಕೊಳ್ಳುವ ಬಗೆ…..

Gitacharya
Spread the love

ಶ್ರೀ ಮದ್ಭಗವದ್ಗೀತಾ : 113

38. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ।
ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ॥

ಇಹ = ಈ ಲೋಕದಲ್ಲಿ, ಜ್ಞಾನೇನ = ಜ್ಞಾನದೊಂದಿಗೆ, ಸದೃಶಂ = ಸಮಾನವಾದ, ಪವಿತ್ರಂ = ಪರಿಶುದ್ಧಿಯನ್ನುಂಟುಮಾಡುವುದು, ನ-ವಿದ್ಯತೇ = ಇಲ್ಲ, ಹಿ = ಅಲ್ಲವೇ! ಯೋಗಸಂಸಿದ್ಧಃ = ನಿಷ್ಕಾಮಕರ್ಮಯೋಗದಿಂದಾಗಲೀ, ಸಮಾಧಿಯೋಗದಿಂದಾಗಲೀ, ಪರಿಶುದ್ಧವಾದ ಚಿತ್ತ ಉಳ್ಳವನು, ಸ್ವಯಂ = ತನಗೆ ತಾನೇ, ಆತ್ಮನಿ = ತನ್ನಲ್ಲಿಯೇ, ತತ್‌ = ಆ ಪರಮಾತ್ಮಜ್ಞಾನವನ್ನು, ಕಾಲೇನ = ಕಾಲಕ್ರಮದಿಂದ, ವಿಂದತಿ = ಹೊಂದುತ್ತಿದ್ದಾನೆ.

ಅರ್ಜುನನೆ! ಈ ಲೋಕದಲ್ಲಿ ಪವಿತ್ರತೆಯನ್ನು ಉಂಟುಮಾಡುವ ಪದಾರ್ಥಗಳು ಸಾಕಷ್ಟು ಇವೆ. ಅವುಗಳಲ್ಲಿ ಜ್ಞಾನದೊಂದಿಗೆ ಸಮಾನವಾದದ್ದು ಮತ್ತೊಂದಿಲ್ಲ. ಆದರೆ ಅದು ಇದ್ದಕ್ಕಿದ್ದಂತೆ ಉದುರಿ ಬೀಳುವುದಿಲ್ಲ. ಜ್ಞಾನ ಬೇಕೆಂದುಕೊಳ್ಳುವ ಮುಮುಕ್ಷುವು ನಿಷ್ಕಾಮಕರ್ಮಯೋಗವನ್ನಾಗಲಿ, ಸಮಾಧಿಯೋಗವನ್ನಾಗಲಿ, ಯಾವಾಗಲೂ ಅಭ್ಯಸಿಸುತ್ತಿರಬೇಕು. ಅದರಿಂದ ಆತನಲ್ಲಿ ಚಿತ್ತಶುದ್ಧಿಯುಂಟಾಗುತ್ತದೆ. ಅದರ ಹೆಸರೇ ಯೋಗಸಂಸಿದ್ಧಿಯು. ಅದು ಉಂಟಾದಮೇಲೆ, ಕ್ರಮಕ್ರಮವಾಗಿ ಆತನು ತನ್ನಷ್ಟಕ್ಕೆ ತಾನಾಗಿಯೇ, ತನ್ನಲ್ಲಿ ತಾನೇ, ಆ ಪರಮಾತ್ಮಜ್ಞಾನವನ್ನು ಪಡೆದುಕೊಳ್ಳುತ್ತಾನೆ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ