ಗೀತೆ – 102 : ಇಂದ್ರೀಯ – ಜ್ಞಾನಯೋಗದ ಬಗ್ಗೆ ಮತ್ತಷ್ಟು ವಿವರಣೆ

Gitacharya
Spread the love

ಶ್ರೀ ಮದ್ಭಗವದ್ಗೀತಾ : 102

27. ಸರ್ವಾಣೀಂದ್ರಿಯ-ಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ।
ಆತ್ಮಸಂಯಮ-ಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ॥

ಅಪರೇ = ಇನ್ನು ಕೆಲವರು ಧ್ಯಾನಯೋಗಿಗಳು, ಜ್ಞಾನದೀಪಿತೇ = ಪರಮಾತ್ಮಜ್ಞಾನದಿಂದ ಹತ್ತಿಕೊಂಡ, ಆತ್ಮಸಂಯಮಯೋಗಾಗ್ನೌ = ತಮ್ಮ ಆತ್ಮಸ್ವರೂಪದ ಮೇಲೆ ಸಂಯಮ ಮಾಡುವುದು ಎಂಬ ಯೋಗಾಗ್ನಿಯಲ್ಲಿ, ಸರ್ವಾಣಿ = ಸಮಸ್ತವಾದ, ಇಂದ್ರಿಯಕರ್ಮಾಣಿ = ಜ್ಞಾನೇಂದ್ರಿಯಗಳಿಗೆ, ಕರ್ಮೇಂದ್ರಿಯಗಳಿಗೆ ಸಂಬಂಧಿಸಿದ ಕೆಲಸಗಳನ್ನು, ಚ = ಮತ್ತು, ಪ್ರಾಣಕರ್ಮಾಣಿ = ಹತ್ತು ತರಹದ ಪ್ರಾಣವಾಯುವುಗಳ ಕರ್ಮಗಳನ್ನೂ, ಜುಹ್ವತಿ = ಆಹುತಿ ಮಾಡುತ್ತಿದ್ದಾರೆ.

ಕೆಲವರು ಧ್ಯಾನಯೋಗಿಗಳು ತಮ್ಮ ಸಂಯಮಪ್ರಕ್ರಿಯೆಯನ್ನು ತಮ್ಮ ಆತ್ಮಸ್ವರೂಪದ ಮೇಲೆಯೇ ಕೇಂದ್ರೀಕರಿಸುತ್ತಾ ಇರುತ್ತಾರೆ. ಅಂತಹ ಆತ್ಮಸಂಯಮಯೋಗಿಗಳಲ್ಲಿ ಕೆಲವರು ಈ ಸಂಯಮವನ್ನು ತಮ್ಮ ಆತ್ಮವಿವೇಕಜ್ಞಾನದ ಉದ್ದೀಪನೆಯಿಂದ ಸಾಧಿಸುತ್ತಿರುತ್ತಾರೆ. ಅಂತಹ ಯೋಗಿಗಳು ತಮ್ಮ ಹತ್ತು ಇಂದ್ರಿಯ ಕರ್ಮಗಳನ್ನು, ತಮ್ಮ ಹತ್ತು ಪ್ರಾಣವಾಯು ಕರ್ಮಗಳನ್ನು ಕೂಡ, ತಮ್ಮ ಆತ್ಮಸಂಯಮಯೋಗಾಗ್ನಿಯಲ್ಲಿಯೇ ಆಹುತಿ ಮಾಡಿಬಿಡುತ್ತಿರುತ್ತಾರೆ. ಅಂದರೆ, ಆಯಾ ಕರ್ಮಗಳೆಲ್ಲವನ್ನೂ ಪರಮಾತ್ಮನ ರೂಪಾಂತರಗಳಂತೆಯೇ ದರ್ಶಿಸುತ್ತಾ ಇರುತ್ತಾರೆ. ಇದು ಕೂಡ ಒಂದು ಜ್ಞಾನಯಜ್ಞವೇ.

(ಮುಂದುವರೆಯುವುದು )
ತೆಲುಗು ರಚನೆ : ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಕನ್ನಡ ಅನುವಾದ : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ

* ಸಂಗ್ರಹ – ಭಾಲರಾ