ಮೈಸೂರು – ಡಿ . 7 ರಂದು ಕನ್ನಡ ಸಿರಿ ಸಂಭ್ರಮ ಸಂಗೀತ ರಸಮಾಂಜಲಿ ಕಾರ್ಯಕ್ರಮ

Spread the love

 

*ಡಿ7 ರದ್ದು ಕನ್ನಡ ಸಿರಿ ಸಂಭ್ರಮ ಸಂಗೀತ ರಸಮಾಂಜಲಿ ಕಾರ್ಯಕ್ರಮ*

ಮೈಸೂರು: ಪಿ ಎಂ ಕ್ರಿಯೇಷನ್ ಪುರುಷೋತ್ತಮ್ ತಂಡದ 9ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಚಿತ್ರಗೀತೆಗಳ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ವಿದ್ಯಾರಣ್ಯಪುರಂನಲ್ಲಿರುವ ಸಾರ್ವಜನಿಕ ಹಾಸ್ಟೆಲ್ ನಲ್ಲಿ ಡಿಸೆಂಬರ್ 7ರಂದು ಶನಿವಾರ ಸಂಜೆ 6:30ಕ್ಕೆ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಿ ಎಂ ಕ್ರಿಯೇಶನ್ಸ್ ತಂಡದ ಸಂಸ್ಥಾಪಕರಾದ ಪುರುಷೋತ್ತಮ್ ತಿಳಿಸಿದ್ದಾರೆ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ ಎಸ್ ಶ್ರೀವತ್ಸ, ವಿಧಾನಪರಿಷತ್ ಸದಸ್ಯರಾದ ವಿವೇಕಾನಂದ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಸುದರ್ಶನ್, ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಮಾಜಿನಗರ ಪಾಲಿಕಾ ಸದಸ್ಯರಾದ ಮ ವಿ ರಾಮಪ್ರಸಾದ್ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ